ಸಮರ್ಥ ಭಾರತ ಮಂಗಳೂರು ಇವರ ಆಶ್ರಯದಲ್ಲಿ ಕೆನರಾ ಕಾಲೇಜ್ ಸಭಾಂಗಣದಲ್ಲಿ ಬಿ ಗುಡ್ ಡು ಗುಡ್ ಅಭಿಯಾನದ ನಿಮಿತ್ತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮ ಪ್ರಾರ್ಥನೆ ಮೂಲಕ ಪ್ರಾರಂಭಗೊಂಡು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಡಾಕ್ಟರ್ ಪಿ ಎಲ್ ಧರ್ಮ ಅಧ್ಯಕ್ಷತೆಯನ್ನು ವಹಿಸಿ ಹಾಗೂ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ರಾಜೇಶ್ ಪದ್ಮರ, ಟ್ರಸ್ಟಿ ಸಮರ್ಥ ಭಾರತ ಹಾಗೂ ಉಪನ್ಯಾಸಕರು ಬೆಂಗಳೂರು ಇವರು ದೀಪವನ್ನು ಪ್ರಜ್ವಲಿಸಿ ಡಾಕ್ಟರ್ ಸತೀಶ್ ರಾವ್ ಜೊತೆಗೆ ಬೀ ಗುಡ್ ಡು ಗುಡ್ ಸಲುವಾಗಿ ಪೋಸ್ಟರ್ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾದ ಪ್ರೊಫೆಸರ್ ರಾಜೇಶ್ ಪದ್ಮರ ಇವರು ಯುವ ಜನತೆಗೆ ಪ್ರೇರಣೆ ಸ್ವಾಮಿ ವಿವೇಕಾನಂದರ ಕುರಿತಾಗಿ ಆಳವಾದ ಉಪನ್ಯಾಸವನ್ನು ನೀಡಿ ಅನೇಕ ಸನ್ನಿವೇಶಗಳನ್ನು ಯುವಜನರ ಪ್ರೇರಣೆಗೆ ಸ್ವಾಮಿ ವಿವೇಕಾನಂದರ ಜೀವನವೇ ಸಾಕ್ಷಿ ಎಂದು ತಿಳಿಸಿದರು. ನಂತರ ಸಂವಾದ ನಡೆಯಿತು ವಿದ್ಯಾರ್ಥಿಗಳು ಹಾಗೂ ಹಿರಿಯರು ಅನೇಕ ಪ್ರಶ್ನೆಗಳನ್ನು ಕೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಧರ್ಮ ಅವರು ಅಧ್ಯಕ್ಷತೆಯ ನುಡಿಗಳನ್ನು ಮಾತನಾಡಿ ಸ್ವಾಮಿ ವಿವೇಕಾನಂದರು ನೀಡಿದ ಮಾತುಗಳು ನಿಜ ಜೀವನದಲ್ಲಿ ಕಾರ್ಯರೂಪಕ್ಕೆ ತಂದಲ್ಲಿ ಮಾತ್ರ ಅದಕ್ಕೆ ಅರ್ಥ ಎಂಬುದನ್ನು ಸ್ಪಷ್ಟಪಡಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡು ಈ ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಕುಮಾರಿ ಸಾಕ್ಷಿ ಹಾಗೂ ಪ್ರಾರ್ಥನೆ ಕುಮಾರಿ ಅನನ್ಯ, ಕುಮಾರಿ ರಿಷಲ್ ಸ್ವಾಗತ ಭಾಷಣ ಮಾಡಿದರು.

