ನಮ್ಮ ನಾಡ ಒಕ್ಕೂಟದ ಅಧಿಕಾರ ಹಸ್ತಾಂತರ : ನೂತನ ಅಧ್ಯಕ್ಷರಾಗಿ ಡಾ. ರಿಝ್ವಾನ್ ಅಹ್ಮದ್

0
30

ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಪದಗ್ರಹಣ * ನಮ್ಮ ನಾಡ ಒಕ್ಕೂಟ (ಎನ್‌ಎನ್‌ಒ) ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭ ಇತ್ತೀಚಿಗೆ ಹೋಟೆಲ್ ಮಣಿಪಾಲ ಇನ್ ರಂಜಿತಾ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.

ನಿರ್ಗಮನ ಅಧ್ಯಕ್ಷ ಮೊಹಮ್ಮದ್ ಸಲೀಂ ಅವರು ನೂತನ ಅಧ್ಯಕ್ಷ ಡಾ. ರಿಝ್ವಾನ್ ಅಹ್ಮದ್ ಕಾರ್ಕಳರವರಿಗೆ ಅದಿಕಾರ ಹಸ್ತಾಂತರಿಸಿದರು.ನಿರ್ಗಮನ ಅಧ್ಯಕ್ಷರಾದ ಮುಹಮ್ಮದ್ ಸಲೀಮ್ ಮೂಡುಬಿದಿರೆ ಅವರು ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ನೂತನ ಅಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಕಾರ್ಕಳ ಅವರು ಅಧಿಕಾರ ಸ್ವೀಕರಿಸಿ, ಸಂಘಟನೆಯ ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.ಒಕ್ಕೂಟದ ಉಪಾಧ್ಯಕ್ಷರಾದ ಸಲೀಮ್ ಬಾಜಿ ಕೈಕಂಬ ಸ್ವಾಗತ ಭಾಷಣ ಮಾಡಿದರು.

ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ವರದಿ ಮಂಡಿಸಿದರು. ನಂತರ ಚುನಾವಣಾಧಿಕಾರಿಯಾಗಿದ್ದ ನಕ್ವಾ ಯಾಹ್ಯ ಮಲ್ಪೆ ಅವರು ಮುಂದಿನ ಎರಡು ವರ್ಷಗಳ ಅವಧಿಗೆ (2026–27) ಆಯ್ಕೆಯಾದ ಹೊಸ ಕೇಂದ್ರ ಸಮಿತಿಯ ಘೋಷಣೆ ಮಾಡಿದರು.ಮುಂದಿನ ಯೋಜನೆಗಳು ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಚರ್ಚೆ ನಡೆಯಿತು.

ಉಪಾಧ್ಯಕ್ಷರಾದ ಹುಸೇನ್ ಹೈಕಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಅಡ್ವೋಕೇಟ್ ಶೇಖ್ ಇಸ್ಹಾಕ್, ಕೋಶಾಧಿಕಾರಿ ಪೀರು ಸಾಹೇಬ್ ಉತ್ತರ ಕಣ್ಣಾ ಜಿಲ್ಲಾ ಅಧ್ಯಕ್ಷ ಇನಯತುಲ್ಲ ಶ್ಯಾಬಂದ್ರೀ, ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ , ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಕೇಂದ್ರ ಸಮಿತಿ ಸದಸ್ಯ ಮುಸ್ತಾಕ್ ಅಹಮದ್ ಬೆಳ್ವೆ , ಕೇಂದ್ರ ಸಮಿತಿ ಸದಸ್ಯರು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳ ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here