ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಐಕೆಎಂಎ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

0
6

ಮಧ್ಯಪ್ರದೇಶ : ಭಾರತ ಸರ್ಕಾರ ಮತ್ತು ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದ ಕಿಕ್ ಬಾಕ್ಸಿಂಗ್ ನ ರಾಷ್ಟ್ರೀಯ ಮಟ್ಟದ ಕ್ರೀಡಾಾಕೋಟ ಜೂನ್ 17ರಿಂದ 21ರವರೆಗೆ ಮಧ್ಯಪ್ರದೇಶದ ಇಂದೋರ ಪಬ್ಲಿಕ್ ಶಾಲೆಯಲ್ಲಿ ನಡೆಯಿತು. ಈ ಕ್ರೀಡೆಯಲ್ಲಿ ಐಕೆಎಂಎ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಯ್ಕೆ ಎಂ ಎ ಕ್ರೀಡಾಪಟುಗಳು 11 ಚಿನ್ನದ ಪದಕ, ಎರಡು ಬೆಳ್ಳಿ ಪದಕ, 9 ಕಂಚಿನ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕರ್ನಾಟಕ ರಾಜ್ಯ ಗೆದ್ದ ಒಟ್ಟು 20 ಚಿನ್ನದ ಪದಕಗಳಲ್ಲಿ ಐಕೆಎಂಎ ವಿದ್ಯಾರ್ಥಿಗಳೇ ಇರುವುದು ಸಂತಸಗರ ಸಂಗತಿಯಾಗಿದೆ. ಇದೊಂದು ಮಹತ್ತರವಾದ ದಾಖಲೆಯಾಗಿಯೂ ಪರಿಣಮಿಸಿದೆ.

ಕ್ರೀಡಾಪಟುಗಳ ಪರಿಶ್ರಮ, ಶಿಸ್ತು, ಸಮರ್ಪಣೆ, ಹಾಗೂ ತರಬೇತುದಾರರ ಉತ್ತಮ ಮಾರ್ಗದರ್ಶನಕ್ಕೆ ಇದು ಸಾಕ್ಷಿಯಾಗಿದೆ. ಒಡಿಸ್ಸಾದ ಖೋರ್ಡಾ ದಲ್ಲಿ ಮೇ 30 ರಿಂದ ಜೂನ್ ಮೂರರವರೆಗೆ ನಡೆದ ಜೂನಿಯರ್ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿಯೂ ಕ್ರೀಡಾಪಟುಗಳು ಮೂರು ಚಿನ್ನದ ಪದಕ, ಒಂದು ಬೆಳ್ಳಿ ಪದಕ, ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದು ಅತ್ಯುತ್ತಮ ಅಮೋಘ ಸಾಧನೆಯನು ಮಾಡಿರುತ್ತಾರೆ.

ಎಲ್ಲ ಕ್ರೀಡಾಪಟುಗಳಿಗೆ ಉತ್ತಮ ತರಬೇತುದಾರರಾಗಿ ನಿತಿನ್ ಸುವರ್ಣ, ಸಂಪತ್ ಕುಮಾರ್ ಅತ್ಯುತ್ತಮ ಮಾರ್ಗದರ್ಶನ ತರಬೇತಿ ನೀಡಿರುತ್ತಾರೆ. ಈ ಎಲ್ಲ ಸಾಧನೆಗಳಿಗೆ, ವಿಜೇತ ಕ್ರೀಡಾಪಟುಗಳಿಗೆ, ತರಬೇತುದಾರರಿಗೆ, ಪೋಷಕರಿಗೆ, ಬೆಂಬಲಿಗರಿಗೆ ವಾಕೊ ಇಂಡಿಯಾದ ಅಧ್ಯಕ್ಷ ಸಂತೋಷ್ ಕೆ ಅಗರ್ವಾಲ್, ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವೇದಿಕೆಯಲ್ಲಿ ಶಿಕ್ಷಕರುಗಳಾದ ನಿತಿನ್ ಸುವರ್ಣ, ಸಂಪತ್ ಕುಮಾರ್, ಶಿವಪ್ರಸಾದ್, ಅವನಿ ಎಂಎಂ, ಅಂಚಿ ಎಂ ಎಂ, ರಾಜೀವ್ ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here