ವರದಿ ರಾಯಿ ರಾಜ ಕುಮಾರ
ಸ್ವತಹ ಪರಿಶ್ರಮ ಪಡುವುದು ನಮ್ಮ ಕರ್ತವ್ಯ, ಅದಕ್ಕೆ ಪೂರಕವಾಗಿ ಗುರು ಹಿರಿಯರ ಆಶೀರ್ವಾದ ದೊರೆತಲ್ಲಿ ಯಾವುದೇ ಸಾಧನೆಯ ಸುಲಭ ಸಾಧ್ಯವಿದೆ ಎಂದು ನ್ಯಾಯವಾದಿ ಜಾರ್ಕಳ ಸದಾನಂದ ಸಾಲ್ಯಾನ್ ನುಡಿದರು. ಅವರು ಕಾರ್ಕಳ ಕ್ರೈಸ್ಟಿಕಿಂಗ್ ಶಿಕ್ಷಣ ಸಂಸ್ಥೆಯ ಸಾಧಕರ ದಿನಾಚರಣೆಯಂದು ಮಾತನಾಡುತ್ತಿದ್ದರು.
ಮೊಬೈಲಿನ ಬದಲು ಮಕ್ಕಳೊಂದಿಗೆ ಬೆರೆಯುವಂತೆ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಇಕ್ಬಾಲ್ ಅಹಮದ್ ಕೇಳಿಕೊಂಡರು. ಸೇವೆಯಲ್ಲಿ ಪ್ರಾಮಾಣಿಕತೆ ತೋರಿಸುವಂತೆ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ ಆಶಿಸಿದರು.
ಟ್ರಸ್ಟ್ ನ ಕಾರ್ಯದರ್ಶಿ ಅವೆಲಿನ್ ಲೂಯಿಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಣಪಯ್ಯ, ಕ್ರೈಸ್ಟ್ ಕಿಂಗ್ ಶಿಕ್ಷಣ ಟ್ರಸ್ಟ್ ಸದಸ್ಯ ಡಾ. ಪೀಟರ್ ಫರ್ನಾಂಡಿಸ್, ಶಿಕ್ಷಕರಕ್ಷಕ ಸಂಕಟದ ಅಧ್ಯಕ್ಷ ದಯಾನಂದ ಮಲೆಬೆಟ್ಟು, ಆಡಳಿತ ಅಧಿಕಾರಿ ಕಿರಣ್ ಕ್ರಾಸ್ತಾ, ಉಪ ಪ್ರಚಾರ್ಯ ಡಾ. ಪ್ರಕಾಶ್ ಭಟ್, ಮುಖ್ಯ ಶಿಕ್ಷಕಿ ಜೋಶ್ನಾ ಸ್ನೇಹಲತಾ, ಹಾಜರಿದ್ದರು.
ಶಿಕ್ಷಕಿ ನಾಗಲಕ್ಷ್ಮಿ ಸ್ವಾಗತಿಸಿದರು. ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ವಿವಿಧ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕರಾದ ಜಯಲಕ್ಷ್ಮಿ, ಆಲಿಸ್ ಲೋಬೋ, ನೀತಿ ಆಚಾರ್ಯ, ಭಾರತಿ ನಾಯಕ್, ಸುನೀತಾ ಸಾಲಿಯಾನ್, ಪಾವನಾ, ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಿಜಿ ಸಿ.ಕೆ. ವಂದಿಸಿದರು.

