ಆಸ್ತಿ ದಾಖಲಾತಿ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ಸುಗಮಗೊಳಿಸುವ ಉದ್ದೇಶದಿಂದ ಹೊಸದಾಗಿ ಜಾರಿಗೊಂಡಿರುವ ಇ-ಸ್ವತ್ತು 2.0 ತಂತ್ರಾಂಶವು ಇದೀಗ ತಾಂತ್ರಿಕ ತೊಡಕುಗಳ ಕಾರಣ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಹೊಸ ವ್ಯವಸ್ಥೆಯ ಮೂಲಕ ಆಸ್ತಿ ದಾಖಲಾತಿ ಪ್ರಕ್ರಿಯೆ ಸುಲಭವಾಗಲಿದೆ ಎಂಬ ಉತ್ತಮ ಉದ್ದೇಶ ಮತ್ತು ನಿರೀಕ್ಷೆಯೊಂದಿಗೆ ಅರ್ಜಿ ಸಲ್ಲಿಸಿರುವ ಸಾವಿರಾರು ನಾಗರಿಕರು, ತಿಂಗಳುಗಳ ಕಾಲ ಅನುಮೋದನೆಗಾಗಿ ಕಾಯುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ್ದಾರೆ. ಅರ್ಜಿಗಳ ಬಹುಪಾಲು ವಿವಿಧ ಹಂತಗಳಲ್ಲಿ ಅನುಮೋದನೆಗಾಗಿ ಬಾಕಿ ಉಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ವಿವಿಧ ಹಂತಗಳಲ್ಲಿ ಸಂಬAಧಿಸಿದ ಅಧಿಕಾರಿಗಳ ಲಾಗಿನ್‌ಗಳಲ್ಲಿ ಒಟ್ಟು ರಾಜ್ಯದಲ್ಲಿ 36,362 ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿದ್ದು, ಇದುವರೆಗೆ ಕೇವಲ 6,823 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ಇ-ಸ್ವತ್ತು 2.0 ಯೋಜನೆಯ ಉದ್ದೇಶ ಶ್ಲಾಘನೀಯವಾದರೂ, ಅದರ ಅನುಷ್ಠಾನದಲ್ಲಿ ಕಾಣಿಸುತ್ತಿರುವ ಅಡಚಣೆಗಳನ್ನು ತಕ್ಷಣ ಸರಿಪಡಿಸದೇ ಹೋದರೆ, “ಡಿಜಿಟಲ್ ಆಡಳಿತ” ಎಂಬ ಆಶಯವೇ ಸಾರ್ವಜನಿಕರಿಗೆ ಭಾರವಾಗುವ ಭೀತಿ ಸಹಜವಾಗಿಯೇ ಮೂಡುತ್ತದೆ.
ತಂತ್ರಾಂಶದಲ್ಲಿನ ತಾಂತ್ರಿಕ ದೋಷಗಳು, ಕಾರ್ಯನಿರ್ವಹಣೆಯಲ್ಲಿನ ಅಸಮರ್ಪಕತೆ ಹಾಗೂ ಈ ಹೊಸ ಪ್ರಯೋಗದ ತಂತ್ರಾಂಶ ಅಳವಡಿಕೆಗೆ ಸಂಬAಧಿಸಿದAತೆ ಸಂಬAಧ ಪಟ್ಟ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಸಮರ್ಪಕ ತರಬೇತಿ ನೀಡದಿರುವುದರಿಂದ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ. ತಂತ್ರಾಂಶವನ್ನು ಸಂಪೂರ್ಣವಾಗಿ ಪರೀಕ್ಷಿಸದೆ ಜಾರಿಗೆ ತಂದಿದ್ದು ಹಾಗು ಪರಿಪೂರ್ಣ ತರಬೇತಿ ನೀಡಿದ ನಂತರವೇ ಅದನ್ನು ಜಾರಿಗೆ ತರುವ ಅಗತ್ಯವಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇ-ಸ್ವತ್ತು ದಾಖಲೆ ಇಲ್ಲದೆ ಸಾಲ ಪಡೆಯುವುದು, ಜಮೀನು ಮಾರಾಟ, ಮನೆ ನಿರ್ಮಾಣ, ಬಹುಮಹಡಿ ಕಟ್ಟಡಗಳ ಅನುಮತಿ, ಅಸ್ತಿ ನೊಂದಣೆಗಳು,ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಅನೇಕ ಅಗತ್ಯ ಕಾರ್ಯಗಳು ಸ್ಥಗಿತ ಗೂಂಡಿರುವುದರಿಂದ, ಸಾರ್ವಜನಿಕರು ದಿನನಿತ್ಯದ ಬದುಕಿನಲ್ಲೇ ಸಂಕಷ್ಟ ಅನುಭವಿಸುತ್ತಿದ್ದು. ಮಹಾನಗರ ಪಾಲಿಕೆ ಕಚೇರಿಗಳಿಗೆ ಅಲೆದಾಡಿದರೂ ಕೆಲಸವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಡಿಜಿಟಲ್ ವ್ಯವಸ್ಥೆಗಳ ಮೇಲೆ ಸಾರ್ವಜನಿಕರ ನಂಬಿಕೆ ಉಳಿಯಬೇಕಾದರೆ, ಇಂತಹ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಿ, ಜವಾಬ್ದಾರಿಯುತ ಹಾಗೂ ಕಾಲಬದ್ಧ ಸೇವೆ ಒದಗಿಸುವುದು ಅತ್ಯಾವಶ್ಯಕವಾಗಿದೆ. ಇಲ್ಲದಿದ್ದರೆ, ಜನಸ್ನೇಹಿ ಆಡಳಿತದ ಆಶಯವೇ ಜನರಿಗೆ ಮತ್ತೊಂದು ತೊಂದರೆಯ ರೂಪದಲ್ಲಿ ಪರಿಣಮಿಸುತ್ತದೆ . ನೊಂದ ಸಾರ್ವಜನಿಕರ ವತಿಯಿಂದ.
ಹೆಚ್. ವಿ. ಮಂಜನಾಥ ಸ್ವಾಮಿ

