ಜಾನಪದ ಕಲಾವಿದೆ ಸರೋಜಮ್ಮ ಶಾಂತವೀರಯ್ಯ ಗುನ್ನಾಳಮಠ ಅವರಿಗೆ ‘ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026’

0
11

ಕೊಪ್ಪಳ, ಜು.15: ಕೊಪ್ಪಳ ಜಿಲ್ಲೆಯ ಗೊರ್ಲೆಕೊಪ್ಪ ಗ್ರಾಮದ ಜಾನಪದ ಶ್ರೇಷ್ಠ ಕಲಾವಿದೆ ಸರೋಜಮ್ಮ ಶಾಂತವೀರಯ್ಯ ಗುನ್ನಾಳಮಠ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ “ಅಂತರ್ ರಾಜ್ಯ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026” ಘೋಷಿಸಲಾಗಿದೆ.

ಜುಲೈ 26ರಂದು ನಡೆಯಲಿರುವ ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.