ಖದೀಜತ್ ಸನಾ : ಬಿ.ಎಸ್ಸಿ MLT ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0
20

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ ಬಿ.ಎಸ್ಸಿ MLT (2022–26 ಬ್ಯಾಚ್) ಮೂರನೇ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಖದೀಜತ್ ಸನಾ ಅವರು ಡಿಸ್ಟಿಂಕ್ಷನ್ (ವಿಶಿಷ್ಟ ಶ್ರೇಣಿ) ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರಗತಿ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯಲ್ಲಿ ಅಧ್ಯಯ ಖದೀಜತ್ ಸನಾ ಅವರ ಈ ಯಶಸ್ಸಿಗೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ನೋಬಲ್ ಕೋಚಿಂಗ್ ಸೆಂಟರ್, ಉಪ್ಪಿನಂಗಡಿ ವತಿಯಿಂದಲೂ ಶುಭಾಶಯಗಳು ವ್ಯಕ್ತವಾಗಿವೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಅವರು ಮುಂದಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here