ಮೂಲ್ಕಿ: ಸಮಾಜ ಸೇವೆ ಮೂಲಕ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ ಡಾ. ಹರಿಕೃಷ್ಣ ಪುನರೂರು

0
14

ಮೂಲ್ಕಿ: ಸಮಾಜ ಸೇವೆ ಮೂಲಕ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡರೆ ಸಾಧಕರಾಗಲು ಸಾಧ್ಯ ಎಂದು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು. ಅವರು ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೊಸ ಅಂಗಣ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮೂಲ್ಕಿ ಕೆ.ಎಸ್. ರಾವ್ ನಗರದ ಸಾಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅವರು ಮಾತನಾಡುತ್ತಾ ಮೂಲ್ಕಿ ಕೆ.ಎಸ್. ರಾವ್ ನಗರದಲ್ಲಿ ಬಹಳಷ್ಟು ಸಮಸ್ಯೆಗಳು ಕಾಡುತ್ತಿದ್ದ ಸಂದರ್ಭದಲ್ಲಿ ಜನರಿಗೆ ನೀರಿನ ಅಭಾವ ಬಂದಾಗ ಪ್ರತಿಭಟನೆಗಳನ್ನು ನಡೆಸಿ ತುಂಬೆಯಿಂದ ನೀರು ಸರಬರಾಜು ಮಾಡಲು ಪ್ರಯತ್ನಿಸಿದೆ ಅದಲ್ಲದೆ ಇಲ್ಲಿಯ 500 ಮನೆಯ ಜನರಿಗೆ ಹಕ್ಕು ಪತ್ರ ಕೊಡುವುದಕ್ಕೆ ಪ್ರಯತ್ನ ಮಾಡಿ ಫಸಲರಾಗಿದ್ದೇನೆ. ಕೆಲವು ಮನೆಗಳಿಗೆ ಹೌಸಿಂಗ್ ಬೋರ್ಡುನಿಂದ ಮನೆ ನಿರ್ಮಾಣಕ್ಕೆ ಸಾಲ ಸಿಗುವುದಕ್ಕೆ ಪ್ರಯತ್ನಿಸಿದ್ದೇನೆ ಹೀಗೆ ಒಂದಲ್ಲ ಹಲವಾರು ಸಮಾಜಿಕ ಕೆಲಸಗಳನ್ನು ಮಾಡಿದ್ದೇನೆ. ಇನ್ನೂ ಕೂಡ ಮಾಡಲು ತಮ್ಮೆಲ್ಲರ ಸಹಕಾರ ಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಜೊಸ್ಸಿ ಪಿಂಟೋ ಕಿನ್ನಿಗೋಳಿ, ಕಾಂತು ಸೇವೆಗಾರ ಟ್ರಸ್ಟ್‌ನ ಅಧ್ಯಕ್ಷ ವಾಸು ಪೂಜಾರಿ ಕೊಲಕಾಡಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಶ್ರೀ ನಾರಾಯಣ ಗುರು ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ ಮತ್ತು ಹಳೆಯಂಗಡಿ ಬಂಕಿ ನಾಯಕರು, ಕೇಶವಾನಂದ ಗುರೂಜಿ ಚಿತ್ರಾಪು, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ವಾಸು ಪೂಜರಿ ಚಿತ್ರಾಮ, ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲ್ಯಾನ್, ಉದ್ಯಮಿ ಜೋನ್ ಕ್ವಾಡ್ರಸ್, ಜಿ.ಸಿ ಟ್ರಸ್ಟ್ನ ಮಾಜಿ ಅಧ್ಯಕ್ಷ ಹಬೀಬುಲ್ಲಾ ನ್ಯಾಯಾವಾದಿ ರವೀಶ್ ಕಾಮತ್, ದೀಪ್ತಿ ಸಾಧು ಅಂಚನ್ ಮಟ್ಟು, ನಿವೃತ್ತ ಪೊಲೀಸ್ ಅಧಿಕಾರಿ ಕೆ. ಎಮ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ವಾಮನ್ ಕೋಟ್ಯಾನ್ ಧನ್ಯವಾದ ಅರ್ಪಿಸಿದರು. ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here