ಮೂಡುಬಿದಿರೆ : ಸಮಗ್ರ ಸ್ವಚ್ಛತಾ ಹಾಗೂ ಜಾಗೃತಿ ಕಾರ್ಯಕ್ರಮ

0
24

ಮೂಡುಬಿದಿರೆಯ ಕಂಬಳದಲ್ಲಿ ಕಂಬಳದ ಸಮಿತಿಯ ಅಧ್ಯಕ್ಷರಾದ ಉಮಾನಾಥ ಎ. ಕೋಟ್ಯಾನ್ ಶಾಸಕರು, ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ, ಕಾರ್ಯದರ್ಶಿ ನಾಗರಾಜ್ ಪೂಜಾರಿ, ಪುರಸಭೆಯ ಮುಖ್ಯಾಧಿಕಾರಿಯಾದ ಇಂದು ಎಂ. ಅವರ ಸಮ್ಮತಿ ಸಹಕಾರದಿಂದ ಮಾಡುಬಿದಿರೆ ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆಯಲ್ಲಿ ದಿನಾಂಕ 31.01.2026 ರಿಂದ 01.02 2026 ರವರೆಗೆ ಆಯೋಜಿಸಲಾದ ಜೋಡುಕರೆ ಕಂಬಳ ಉತ್ಸವವನ್ನು ಶೂನ್ಯ ತ್ಯಾಜ್ಯ ಕಂಬಳವನ್ನಾಗಿ ರೂಪಿಸುವ ಉದ್ದೇಶದಿಂದ ಮಾಡುಬಿದಿರೆ ಪುರಸಭೆ. ಕಂಬಳ ಸಮಿತಿ ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಸಮಗ್ರ ಸ್ವಚ್ಛತಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಯಿತು.

ಈ ಸಂಬಂಧ ಪುರಸಭೆಯ ವತಿಯಿಂದ ಶೆಟ್ಟಿ ಹಾಲ್ ಬದಿಯಲ್ಲಿರುವ ಗೇಟ್ ಸಮೀಪ ದೂಡುಬಿದಿರೆ ಪುರನಭೆಯ ಮಾಹಿತಿ ಜಾಗೃತಿ ಸಾರ್ವಜನಿಕರಿಗೆ ಉಚಿತ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಎನ್.ಕೆ.ಎಫ್. ನೀರಿನ ಫಿಲ್ಟರ್ ಘಟಕವನ್ನು ಅಳವಡಿಸಲಾಯಿತು. ಕಂಬಳ ಸಮಿತಿಯ ವತಿಯಿಂದ ಆಯೋಜಿಸಲಾದ ಸಾರ್ವಜನಿಕ ಊಟದ ವ್ಯವಸ್ಥೆಯಲ್ಲಿಯೂ ಹಾಗೂ ವೇದಿಕೆಯಲ್ಲಿಯೂ 20 ಲೀಟರ್ ಡಿಸ್ಪೆನ್ಸರ್ ಹಾಗೂ ಸ್ಟೀಲ್ ಲೋಟಗಳ ಮೂಲಕ ನೀರು ವಿತರಿಸಲಾಯಿತು.

ಪುರಸಭೆಯ ಸ್ಪಾಲ್‌ನಲ್ಲಿ ಲೇನ್ ಕಾಂಪೋಸ್ಟ್ ಪದ್ಧತಿಯ ಮೂಲಕ ಸಿದ್ಧಪಡಿಸಿದ ಗೊಬ್ಬರವನ್ನು ಮಾರಾಟ ಮಾಡಲಾಯಿತು. ಸಾಹಸ ಸರ್ಕಾರೇತರ ಸಂಸ್ಥೆಯ ವತಿಯಿಂದ ಒಣ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿದ ಎಂ.ಆರ್.ಎಫ್ ಘಟಕದ ಮಾದರಿ ಪ್ರದರ್ಶನ, ಸಿ.ಡಿ.ಡಿ ಇಂಡಿಯಾ ಸಂಸ್ಥೆಯಿಂದ ಎಫ್.ಎಸ್.ಟಿ.ಪಿ ಘಟಕದ ಪ್ರಾತ್ಯಕ್ಷಿಕ ಹಾಗೂ ವಿಡಿಯೋ ಪ್ರದರ್ಶನ ನಡೆಸಲಾಯಿತು.

ಡೈಲಿ ಡಂಪ್ (ಮಂಗಳೂರು) ಸಂಸ್ಥೆಯಿಂದ ಮನೆ ಹಾಗೂ ಅಪಾರ್ಟೆಂಟ್‌ಗಳಲ್ಲಿ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿಸುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ವೈವ್ ಕಾಂಪೋಸ್ಟ್, ಬಕೆಟ್ ಕಾಂಪೋಸ್ಟ್ ಹಾಗೂ ಲೇನ್ ಕಾಂಪೋಸ್ಟರ್ ಘಟಕಗಳ ಕುರಿತು ಕರಪತ್ರ ಮತ್ತು QR code ಸ್ಕ್ಯಾನರ್ ಮುಖಾಂತರ ಜಾಗೃತಿ ಮಾಡಿಸಲಾಯಿತು.

ಮಕ್ಕಳಲ್ಲಿ ಪರಿಸರ ಅರಿವು ಮಾಡಿಸುವ ಸಲುವಾಗಿ ಎರಡು ಸೆ ಬೂತ್ಗಳನ್ನು ನಿರ್ಮಿಸಲಾಯಿತು. ಸ್ವಚ್ಛ ಮೂಡುಬಿದಿರೆಗೆ ಬೆಂಬಲ ನೀಡುವ ಸಂದೇಶ ಹಾಗೂ ಪ್ರಜ್ಞಾವಂತ ನಾಗರಿಕನಾಗಿ ವರ್ತಿಸುವ ಕುರಿತು ಪ್ರಚಾರ ಮಾಡಲಾಯಿತು. ಹಾವು-ಏಣಿ ಆಟದ ಮೂಲಕ ಕಸ ಸುಡುವುದು, ಏಕಬಳಕೆ ಪ್ಲಾಸ್ಟಿಕ್ ಬಳಕೆ ಇತ್ಯಾದಿಗಳ ದುಷ್ಪರಿಣಾಮಗಳು ಹಾಗೂ ಕಸ ವಿಂಗಡಣೆ, ಗೊಬ್ಬರೀಕರಣದ ಲಾಭಗಳ ಕುರಿತು ತಿಳಿಸಲಾಯಿತು. ಆಟದಲ್ಲಿ ಗೆದ್ದ ಮಕ್ಕಳಿಗೆ ತಂಗಿನಕಾಯಿ ಗೆರಟೆ ಹಾಗೂ ಉಪಯೋಗಿಸಿದ ಉತ್ತಮ ಬಟ್ಟೆಯಿಂದ ತಯಾರಿಸಿದ upcycled ಕೀಚೈನ್ ಗಳನ್ನು ಬಹುಮಾನವಾಗಿ ವಿತರಿಸಲಾಯಿತು.

ಎಲ್ಲಾ ವ್ಯಾಪಾರಸ್ಥರು ಪರಿಸರ ಪೂರಕ ವಸ್ತುಗಳನ್ನು ಬಳಸುತ್ತಿರುವ ಕುರಿತು ಸ್ವಚ್ಚತಾ ರಾಯಭಾರಿಗಳಾದ ಸಂದ್ಯಾ ಅಳಕ್ಕೆ. ಗೋಪಾಲ್ ಮೊಯ್ಲಿ. ತೇಜನ್ ದಾನ್. ಪರಿಸರ ಪ್ರೇಮಿಗಳಾದ ಪಾನಕ ಸಮಿತಿಯ ನಿರಂಜನ್ ಅವರು, ಪುರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಕಮ್ಯುನಿಟಿ ಮೊಬಿಲೈಜರ್‌ಗಳ ತಂಡ ನಿರಂತರ ಪರಿಶೀಲನೆ ನಡೆಸಿತು. ಪರ್ಯಾಯ ವಸ್ತುಗಳನ್ನು ಪುರಸಭೆಯ ಅಂಗಡಿ ಮಳಿಗೆಯಲ್ಲಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಯಿತು.

ಅಡಿಕೆ ಹಾಳೆ, ಅಡಿಕೆ ಪ್ಲೇಟ್, ಬೌಲ್, ಬಿದಿರಿನ ಚಮಚ, ಪೋರ್ಕ್ ಹಾಗೂ ಬಯೋಡಿಗ್ರೇಡಬಲ್ ಕವರ್‌ಗಳನ್ನು ಉದ್ಯಮದ ಉದ್ದಿಮೆದಾರರಾದ ಕಾಕುಂಜೆ ವೆಲ್ವೆಸ್ ವತಿಯಿಂದ ವಿದ್ಯಾರ್ಥಿ ಸ್ವಯಂಸೇವಕರ ಮುಖಾಂತರ ಸ್ವಾಕ್ ಇಟ್ಟು ನೇರವಾಗಿ ವ್ಯಾಪಾರಸ್ಥರಿಗೆ ಒದಗಿಸುವ ವ್ಯವಸ್ಥೆ ಮಾಡಲಾಯಿತು. ಸಂಧ್ಯಾ ಅವರ ನಿನರ್ಗ tumblers ನ ಸ್ಟೀಲ್ ಲೋಟಗಳು ಉಪಯೋಗಕ್ಕೆ ಲಭ್ಯವಿದ್ದವು.

ಕಂಬಳ ಸ್ಥಳದಾದ್ಯಂತ ಹಾಗೂ ಸಂಪರ್ಕಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ಗ್ಯಾಲರಿ, ವೇದಿಕೆ, ಊಟದ ವ್ಯವಸ್ಥೆ ಮತ್ತು ಶೌಚಾಲಯಗಳ ಬಳಿ ಹಸಿ ಕಸ ಮತ್ತು ಒಣ ಕಸಕ್ಕೆ ಪ್ರತ್ಯೇಕ ಗೋಣಿಚೀಲಗಳನ್ನು ಅಳವಡಿಸಲಾಯಿತು ಪೌರಕಾರ್ಮಿಕರ ತಂಡಗಳು 24 ಗಂಟೆಗಳ ಕಾಲ ನಿರಂತರವಾಗಿ ಸ್ವಚ್ಚತಾ ಕಾರ್ಯ ನಡೆಸಿ ಊಟದ ತ್ಯಾಜ್ಯ ಹಾಗೂ ವ್ಯಾವಾರದ ಕಸ ಹೊರಚೆಲ್ಲದಂತೆ ನಿಗಾ ವಹಿಸಿ ತಕ್ಷಣವೇ ತೆರವುಗೊಳಿಸಿದರು.

LEAVE A REPLY

Please enter your comment!
Please enter your name here