ದಾವಣಗೆರೆ : ಚಿಕ್ಕಮಗಳೂರಿನ ರಚಿತ ಮಹಿಳಾ ಸಮಾಜದಿಂದ ಫೆ. 8 ರಂದು ಭಾನುವಾರ ಬೆಳಿಗ್ಗೆ 10-30ಕ್ಕೆ ಚಿಕ್ಕಮಗಳೂರಿನ ಎಂ.ಎಲ್.ಪಿ.ರೋಟರಿ ಸಭಾಂಗಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮತ್ತು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ದಂಪತಿಯವರಿಗೆ “ಆದರ್ಶ ದಂಪತಿಗಳು” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಚಿತ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕವಿತಾ ಗೋಪಾಲ್‌ರವರು ತಿಳಿಸಿದ್ದಾರೆ.
ರಚಿತ ಮಹಿಳಾ ಸಮಾಜದ 29ನೇ ವರ್ಷದ ಸಂಭ್ರಮಾಚರಣೆ, ಕನ್ನಡ ಕವನ’ ಕವನ ಸಂಕಲನದ ಲೋಕಾರ್ಪಣೆ, ರಾಜ್ಯ ಮಟ್ಟದ ಕವಿಗೋಷ್ಠಿ, ಮಲೆನಾಡ ಮಾತೆ’, ‘ಮಲೆನಾಡ ಮಾಣಿಕ್ಯ’ ರಾಜ್ಯ ಪ್ರಶಸ್ತಿ ಸೇರಿದಂತೆ ಮುಂತಾದ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ರಚಿತ ಮಹಿಳಾ ಸಮಾಜದ ಸಮಿತಿಯವರು ಪ್ರಕಟಿಸಿದ್ದಾರೆ.

