ಮಹಿಳೆ ಆತ್ಮಹತ್ಯೆ ; ಪ್ರಕರಣ ದಾಖಲು

0
115

ಉಡುಪಿ : ಕೊರಂಗ್ರಪಾಡಿಯಲ್ಲಿ ವಾಸ ಮಾಡಿಕೊಂಡಿದ್ದ ವಿವಾಹಿತ ಮಹಿಳೆ ಗೌರಮ್ಮ(20) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನಗಳ ಹಿಂದೆ ಗೌರಮ್ಮ ಹಾಗೂ ಸಿದ್ದರಮೇಶ ಅವರು ಕೊಪ್ಪಳ ಜಿಲ್ಲೆಯಲ್ಲಿರುವ ತಂದೆಯ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ಹೋಗಿ ಉಡುಪಿಗೆ ಬಂದಿದ್ದರು.

ಸಿದ್ದರಮೇಶ ಕೆಲಸದಲ್ಲಿದ್ದ ಆತ ಮನೆಗೆ ಬಂದು ನೋಡಿದಾಗ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದು , ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ವೈದ್ಯರು ಪರೀಕ್ಷಿಸಿ ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here