ರೈತ ಕಾರ್ಮಿಕರ ಅಖಿಲ ಭಾರತ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ಬೆಂಬಲ

0
19

ವರದಿ ರಾಯಿ ರಾಜ ಕುಮಾರ

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ಸೂಕ್ತ ಕಾಲಕ್ಕೆ ನಡೆಸದೆ ಕಳೆದ ಏಳು ವರ್ಷಗಳಿಂದ ಸಾರ್ವಜನಿಕರನ್ನು ಸತಾಯಿಸುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಹುದ್ದೆಗಳು ಕಳೆದ ಆರು ಏಳು ವರ್ಷಗಳಿಂದ ಖಾಲಿ ಬಿದ್ದಿದ್ದು ಸೂಕ್ತ ನೇಮಕಾತಿ ಇಲ್ಲದೆ ರಾಜ್ಯದ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ಖಾಲಿ ಬಿದ್ದಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ಹೊಸ ಹುದ್ದೆಗಳ ಸೃಷ್ಟಿಗೆ ಇರುವ ನಿಷೇಧವನ್ನು ತೆಗೆದು ಹಾಕಬೇಕೆಂದು ರೈತ ಕಾರ್ಮಿಕರ ನೇತೃತ್ವದಲ್ಲಿ ದೇಶ ವ್ಯಾಪಿ ನಡೆಯುತ್ತಿರುವ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಫೆಬ್ರವರಿ 7ರಂದು ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ನಡೆದ ಸಿಐಟಿಯು ಸಂಘಟನೆಯ ಮುಷ್ಕರದಲ್ಲಿ ಕಾರ್ಮಿಕ ಮುಂದಾಳುಗಳಾದ ಸೀತಾರಾಮ ಬೇರಿಕೆ, ಮೂಡುಬಿದಿರೆಯ ಮುಂದಾಳುಗಳಾದ ರಮಣಿ, ರಾಧಾ, ಯಾದವ ಶೆಟ್ಟಿ, ವಸಂತ ಆಚಾರಿ, ಲಕ್ಷ್ಮಿ, ಗಿರಿಜಾ ಇತ್ಯಾದಿಯರು ಭಾಗವಹಿಸಿದ್ದರು.

ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮ ಅವರು ಕೃಷಿ ವಲಯ ಬಿಕ್ಕಟ್ಟಿನಲ್ಲಿದೆ, ರೈತಾಪಿ ಜನರ ಬದುಕು ದುಸ್ತರವಾಗಿದೆ, ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ, ದೇಶದಲ್ಲಿ ಅಸಮಾನತೆಗಳು ಹೆಚ್ಚುತ್ತಿವೆ, ದೇಶದ ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. 2018 ರಿಂದ 24ರ ತನಕ ನೀಡಬೇಕಿದ್ದ ಬಾಕಿ ವೇತನವನ್ನು ಪಾವತಿ ಮಾಡದೆಯೇ ಮಾಲಕರು ಶೋಷಿಸುತ್ತಿದ್ದಾರೆ.

ಫೆಬ್ರವರಿ 12ರಂದು ದೇಶಾದ್ಯಂತ ಕಾರ್ಮಿಕ ನೇತೃತ್ವದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದು ಮೂಡುಬಿದಿರೆಯಿಂದ ಹೆಚ್ಚಿನ ಜನ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಐಟಿಯು ಸಂಘಟನೆಯ ನೇತಾರರು ತಿಳಿಸಿದರು.

LEAVE A REPLY

Please enter your comment!
Please enter your name here