ಕುಲಾಲ ಸಮಾಜದ ಅರ್ಥ ಪೂರ್ಣ ಕಾರ್ಯಕ್ರಮದ ಜೊತೆಗೆ ನಾವೆಲ್ಲರೂ ಆಶಕ್ಕರ ಪರ ನಿಲ್ಲಬೇಕು – ನ್ಯಾಯವಾದಿ ಅಪ್ಪು ಮೂಲ್ಯ
ಪುಣೆ : ಕುಲಾಲ ಸಂಘ (ರಿ) ಪಿಂಪ್ರಿ – ಚಿಂಚಿವಾಡ್ ಪುಣೆಯ 15 ನೇ ವರ್ಷದ ವಾರ್ಷಿಕ ಮಹಾಸಭೆಯು ಜನವರಿ 26 ರಂದು ಜ್ಞಾನಜ್ಯೋತಿ ಸಾವಿತ್ರಿದಾಯಿ ಸ್ಮಾರಕ ಭವನ, ಅಂಬೇಡ್ಕರ್ ಪ್ರತಿಮೆಯ ಹಿಂಭಾಗ ಪಿಂಪ್ರಿ ಇಲ್ಲಿ ಸಂಘದ ಅಧ್ಯಕ್ಷರು ಶ್ರೀ ರವಿ.ಕೆ.ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಸಂಘದ ಸ್ಥಾಪಕ ಅಧ್ಯಕ್ಷರು ಅಪ್ಪು ಮೂಲ್ಯ ದಂಪತಿ ಹಾಗೂ ಮುಂಬೈ ಕುಲಾಲ ಸಂಘದ ಪದಾಧಿಕಾರಿಗಳು,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಪಿಂಪ್ರಿ – ನೆಹರು ನಗರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷರು ಶ್ರೀಧರ್ ಶೆಟ್ಟಿ, ಪುಣೆ ಕುಲಾಲ ಸಂಘದ ಅಧ್ಯಕ್ಷರು ದೊಡ್ಡಣ್ಣ ಸಿ ಮೂಲ್ಯ,ಮುಂಬೈ ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಚಿತ್ರ ಡಿ ಬಂಜನ್,ನ್ಯಾಯವಾದಿ ಅಪ್ಪು ಮೂಲ್ಯ,ಸಂಘದ ಪ್ರಧಾನ ಕಾರ್ಯದರ್ಶಿ ಜಯ ಮೂಲ್ಯ,ಕೋಶಾಧಿಕಾರಿ ಕಿಶೋರ್ ಮೂಲ್ಯ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾತಿ ಮೂಲ್ಯ ಎಲ್ಲರನ್ನೂ ಸ್ವಾಗತಿಸಿ,ದೀಕ್ಷಿತಾ ಸುಕೇಶ್ ಮೂಲ್ಯ ವಂದಿಸಿದರು.

