ವೈದ್ಯಕೀಯ ಪ್ರತಿನಿಧಿಗಳು ನಿರಂತರ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿ ಯಶಸ್ಸು ಸಾಧಿಸಬೇಕು : ಡಾ. ಹಾಜಿ ಯು.ಕೆ. ಮೋನು

0
12

ಮಂಗಳೂರು : “ವೈದ್ಯಕೀಯ ಪ್ರತಿನಿಧಿಗಳು ವಿವಿಧ ವೈದ್ಯಕೀಯ ಕಾರ್ಯಗಾರಗಳಲ್ಲಿ ಭಾಗವಹಿಸಿ, ನಿರಂತರ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ನೂತನ ಆವಿಷ್ಕಾರ, ಆಧುನಿಕ ಬೆಳವಣಿಗೆಗಳಿಗೆ ಸ್ಪಂದಿಸಿ ತಮ್ಮ ವೈದ್ಯಕೀಯ ಜ್ಞಾನವನ್ನು ವೃದ್ಧಿಸಿ, ಯಶಸ್ಸು ಸಾಧಿಸಬೇಕು ಮಾತವಲ್ಲದೆ ಜನಮನ್ನಣೆಗೆ ಪಾತರಾಗಬೇಕು” ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ನಿರ್ದೇಶಕರಾದ ಡಾ. ಹಾಜಿ ಯು.ಕೆ. ಮೋನು ಸಲಹೆ ನೀಡಿದ್ದಾರೆ. ಅವರು ತಮ್ಮ ಸಂಸ್ಥೆಯ ಮಕ್ಕಳ ಶಾಸ್ತ್ರ ಮತ್ತು ಚಿಕಿತ್ಸಾ ವಿಭಾಗದ ಔಷಧ ಶಾಸ್ತ್ರ ವಿಭಾಗ, ಸೂಕ್ಷ್ಮ ಜೀವ ಶಾಸ್ತ್ರ ವಿಭಾಗ ಸಹಯೋಗದೊಂದಿಗೆ ಅವರ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ತಾ: 07-02-2026 ರಂದು ತಮ್ಮ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನ ಅವಧಿಯ “ಪುಟ್ಟ ರೋಗಿಗಳು ಮತ್ತು ದೊಡ್ಡ ನಿರ್ಧಾರಗಳು” ಎಂದು ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಡೀನ್‌ರವರಾದ ಡಾ. ಶಹನವಾಜ್ ಮಣಿಪಾಡಿ ಅವರು ಈ ಕಾರ್ಯಗಾರದಲ್ಲಿ ರಾಷ್ಟ್ರ ಮಟ್ಟದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳ ಶಾಸ್ತ್ರ ಕ್ಷೇತದಲ್ಲಿ ಇತ್ತೀಚಿಗೆನ ಪಗತಿ ಮತ್ತು ಬೆಳವಣಿಗೆಗಳನ್ನು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅತಿಥಿ ಉಪನ್ಯಾಸವನ್ನು ನೀಡಲಿರುವರು. ಹಿರಿಯ ಪ್ರಾದ್ಯಾಪಕರಾದ ಡಾ. ಶಂಶಾದ್ ಎ. ಖಾನ್ ರವರು ಕಾರ್ಯಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.

ಈ ವೈದ್ಯಕೀಯ ಕಾರ್ಯಗಾರದಲ್ಲಿ ಬೆಂಗಳೂರು ನಗರ ಮೂಲದ ಮಣಿಪಾಲ ಆಸತ್ರೆಯ ಡಾ. ಭಾಸ್ಕರ್ ಶೆಣೈ ದಿಕ್ಕೂಚಿ ಭಾಷಣ ಮಾಡಿದರು. ಕೊಯಮುತ್ತೂರು ನಗರ ಮೂಲದ ಕೊಯ್ ಆಸ್ಪತ್ರೆಯ ಡಾ. ಅಶ್ವತ್ ದೊರೆಸ್ವಾಮಿ ಯವರು ಟೈಫೋಯಿಡ್ ರೋಗ ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಕೊಚ್ಚಿ ನಗರದ ಅಮೃತ ವೈದ್ಯಕೀಯ ಕಾಲೇಜಿನ ಡಾ. ಪಿನ್ನಿ ಲೂಯಿಸ್ ಪಲಟ್ಟಿಯವರು ಮಕ್ಕಳ ರೋಗ ಮತ್ತು ಲಕ್ಷಣ ಮತ್ತು ಕಾರಣಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಬೆಂಗಳೂರು ನಗರ ಮೂಲದ ಕಾವೇರಿ ಆಸ್ಪತೆಯ ಡಾ. ಅಕ್ಷತಾ ರವೀಂದರವರು ಮಕ್ಕಳಲ್ಲಿ ಅನಾವಶ್ಯಕ ರೋಗ ನಿರೋಧಕ ಔಷಧ ಬಳಕೆಯ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ನಾಲ್ವರಿಗೆ ವೈದ್ಯಕೀಯ ವೃತ್ತಿಯಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ವೈದ್ಯಕೀಯ ಕ್ಷೇತದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಮಕ್ಕಳ ಸಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಓನೀಲ್ ಫೆರ್ನಾಂಡಿಸ್ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ. ಎಂ.ವಿ. ಪಭು, ಡಾ. ಅಂಜನ್ ಕುಮಾರ್, ಡಾ. ರೋಹನ್ ಮೋನಿಸ್, ಡಾ. ಮನೋಹರ್ ರೇವಂಕರ್, ಡಾ. ಯಶ್ವಂತ್ ಕುಮಾ‌ರ್ ಉಪಸ್ಥಿತರಿದ್ದರು. ಡಾ. ಡೈಲಾನ್ ಡಿ’ಸೋಜಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ವಂದಿಸಿದರು. ಈ ಕಾರ್ಯಗಾರವು ಸುಮಾರು 150 ವೈದ್ಯಕೀಯ ಪ್ರತಿನಿಧಿಗಳಿಗೆ ವಿಶೇಷ ಆಸಕ್ತಿ ಮೂಡಿಸಿತ್ತು.

ವರದಿ : ಎಂ.ವಿ. ಮಲ್ಯ

LEAVE A REPLY

Please enter your comment!
Please enter your name here