ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜಾನಪದ ಜ್ಞಾನದ ಜಾಗೃತಿ : ರಸಪ್ರಶ್ನೆ ಸ್ಪರ್ಧೆಯ ಮೂಲಕ ಕಂಪು ಬೀರಿದ ಮಣ್ಣಿನ ಸಂಸ್ಕೃತಿ!

0
25

ಜಾನಪದವು ಕೇವಲ ಸಾಂಪ್ರದಾಯಿಕ ಕಲೆಯಾಗಿ ಉಳಿಯದೆ, ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಆಸಕ್ತಿದಾಯಕ ವಿಷಯವಾಗಿ ರೂಪುಗೊಂಡಿದೆ.

ಯುವಜನತೆಯಲ್ಲಿ ನಮ್ಮ ಮಣ್ಣಿನ ಸಂಸ್ಕೃತಿ, ಇತಿಹಾಸ ಮತ್ತು ಜ್ಞಾನ ಪರಂಪರೆಯ ಕುರಿತು ಅಧ್ಯಯನಶೀಲ ಆಸಕ್ತಿಯನ್ನು ಮೂಡಿಸುವಲ್ಲಿ ಜಾನಪದ ಶಿಕ್ಷಣವು ನಿರ್ಣಾಯಕ ಪಾತ್ರ ವಹಿಸುತ್ತದೆ.

ಈ ನಿಟ್ಟಿನಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳು ಮತ್ತು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಜಾನಪದ ರಸಪ್ರಶ್ನೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

​ಕಾರ್ಯಕ್ರಮದ ವಿವರ ಹಾಗೂ ಗಣ್ಯರ ಉಪಸ್ಥಿತಿ:-

ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ನೆರವೇರಿಸಿದರು. ಮೂಡುಬಿದಿರೆ ಜಾನಪದ ಪರಿಷತ್ತಿನ ಅಧ್ಯಕ್ಷೆ ಪದ್ಮಶ್ರೀ ನಿಡ್ಡೋಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಮಂದಾರ ರಾಜೇಶ್ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಜಿಲ್ಲಾ ಘಟಕದ ಪರವಾಗಿ ಉಪಸ್ಥಿತರಿದ್ದರು.

ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಶಿವಪ್ರಸಾದ್ ಭಟ್ ಮತ್ತು ಡಾ. ವಾದಿರಾಜ ಕಲ್ಲೂರಾಯ ಸಹಿತ ಜಾನಪದ ತಾಲೂಕು ಘಟಕದ ಸದಸ್ಯರಾದ ಸದಾನಂದ ನಾರಾವಿ, ಸದಾಶಿವರಾವ್, ಉದಯಕುಮಾರ್, ವೇದಾವತಿ ಅರವಿಂದ, ವಿಜಯ ಪರಾಡ್ಕರ್, ರತ್ನಾವತಿ ಪರಾಡ್ಕರ್, ಕೇಮಾರು ಜಯದೇವ ಭಟ್, ಭಾಗ್ಯ ಜಯದೇವ ಭಟ್, ರಾಜೇಂದ್ರ ಹೆಗ್ಡೆ, ಸತೀಶ್ ಅಬ್ಬನಡ್ಕ, ದಿನ್ ರಾಜ್ ಕೆ, ಭರತ್ ಶೆಟ್ಟಿಗಾರ್, ಬಸವರಾಜ ಮಂತ್ರಿ, ಶಾಶ್ವತ್ ಆಚಾರ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

​ಕಾರ್ಯಕ್ರಮ ನಿರ್ವಹಣೆ ಹಾಗೂ ಸಂಯೋಜನೆ:-

ಒಟ್ಟು 12 ತಂಡಗಳು ರಸಪ್ರಶ್ನೆಯಲ್ಲಿ ಸ್ಪರ್ಧಿಸಿದ್ದು, ಸುಮಾರು 600 ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಹಾಗೂ ಅಧ್ಯಯನಶೀಲರಾಗಿ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಚೇತನ ರಾಜೇಂದ್ರ ಹೆಗ್ಡೆ ಹಾಗೂ ಮಲ್ಲಿಕಾ ಸುಕೇಶ್ ಅತ್ಯುತ್ತಮವಾಗಿ ನಿರ್ವಹಿಸಿದರು. ಸತೀಶ ಅಬ್ಬನಡ್ಕ ವಂದಿಸಿದರು. ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದ ಪೂರಕ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಭಾಗವಹಿಸಿದ ಎಲ್ಲರಿಗೂ ರುಚಿಕರ ಊಟ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಿತ್ತು.

ಪ್ರತಿಷ್ಠಿತ ಅಗರಿ ಸಂಸ್ಥೆಯು ಬಹುಮಾನಗಳನ್ನು ನೀಡಿ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿತು.

‘ತುಳುನಾಡು ವಾರ್ತೆ’ ಪತ್ರಿಕೆ ಮತ್ತು ಯೂಟ್ಯೂಬ್ ಮಾಧ್ಯಮದ ಪ್ರಸಾರ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

​ವಿದ್ಯಾರ್ಥಿಗಳಿಗಾದ ಉಪಯೋಗಗಳು:-

ಜಾನಪದ ರಸಪ್ರಶ್ನೆಯು ಮಕ್ಕಳಲ್ಲಿ ವಿಷಯಾಧಾರಿತ ಜ್ಞಾನ, ವಿಮರ್ಶಾತ್ಮಕ ಚಿಂತನೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಿತು.

​ಸಂಸ್ಕೃತಿ ಪರಿಚಯ:-

ತಲೆಮಾರುಗಳಿಂದ ಹರಿದುಬಂದಿರುವ ನಾಡಿನ ಆಚಾರ-ವಿಚಾರ, ಮೌಖಿಕ ಸಾಹಿತ್ಯ ಮತ್ತು ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಹಾಗೂ ಜಾಗೃತಿ ಮೂಡಿಸಿತು

​ಸ್ಪರ್ಧಾತ್ಮಕ ಮನೋಭಾವ:-

ಇಂತಹ ಪ್ರಾದೇಶಿಕ ರಸಪ್ರಶ್ನೆಗಳು ಮಕ್ಕಳಲ್ಲಿ ತಂಡಸ್ಪೂರ್ತಿ, ಸಾರ್ವಜನಿಕವಾಗಿ ಉತ್ತರಿಸುವ ಧೈರ್ಯ ಮತ್ತು ಸ್ಪರ್ಧಾತ್ಮಕ ಕೌಶಲಗಳನ್ನು ಬೆಳೆಸಲು ನೆರವಾದವು.