ಬಹುಮುಖ ಪ್ರತಿಭೆ ಬಾಲಕಿ ಶಾನ್ವಿ ಎಸ್. ಓಂಕಾರಿ

0
28

ಬೆಂಗಳೂರು ನಿವಾಸಿಯಾಗಿರುವ ಶಿವರಾಜ್ ಓಂಕಾರಿ ಮತ್ತು ನಿರ್ಮಲಾ ಡಿ. ಶಿವರಾಜ್ ದಂಪತಿಯ ಪುತ್ರಿಯಾಗಿರುವ ಶಾನ್ವಿ ಎಸ್. ಓಂಕಾರಿ. ಈಕೆ ಬೆಂಗಳೂರಿನ ಕ್ರೈಸ್ಟ ಕಿಂಗ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಸೌಮ್ಯ ಎಸ್. ಶರ್ಮ ಅವರಲ್ಲಿ ಸೀನಿಯರ್ ಡಿಪ್ಲೋಮಾ ವಿಭಾಗದಲ್ಲಿ ಕಲಿಯುತ್ತಿರುವ ಈಕೆ, ಶಾಸ್ತ್ರೀಯ ಸಂಗೀತವನ್ನು ನಾಗಮಣಿ ಶರ್ಮರಲ್ಲಿ, ಬಾಸ್ಕೆಟ್ ಬಾಲ್ ತರಬೇತಿಯನ್ನು ಡೇನಿಯಲ್ ಅವರಿಂದ ಪಡೆಯುತ್ತಿದ್ದಾಳೆ. ಬರವಣಿಗೆ, ಸ್ಪೆಲ್ ಬಿ, ವಿಜ್ಞಾನ, ಗಣಿತ, ಇಂಗ್ಲೀಷ್ ಪರೀಕ್ಷೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಹೀಗೆ ಬಹುಮುಖ ಪ್ರತಿಭೆಯಾಗಿರುವ ಈಕೆ ಭರತನಾಟ್ಯದಲ್ಲಿ ಗಂಗೂಬಾಯಿ ಹಾನಗಲ್ (ರಾಜ್ಯ ಮಟ್ಟ) ಜೂನಿಯರ್ ಪರೀಕ್ಷೆ ಮುಗಿಸಿದ್ದು, ಬೆಂಗಳೂರು, ತುಮಕೂರು, ಮೈಸೂರು ಮತ್ತು ತಮಿಳುನಾಡು ರಾಜ್ಯದ ತಂಜಾವೂರಿನ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ಮೂಲಕ ತನ್ನ ಪ್ರತಿಭೆಯನ್ನು ಪರಿಚಯಿಸಿದ್ದಾಳೆ.

ಇತ್ತೀಚಿಗೆ ಮೂಲ್ಕಿಯ ಯುಗ ಪುರುಷ ಸಭಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ತನ್ನ ನೃತ್ಯ ಪ್ರತಿಭೆ ಪ್ರದರ್ಶನ ನೀಡಿರುತ್ತಾರೆ. ಭರತನಾಟ್ಯದ ಗಂಧರ್ವ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿರುತ್ತಾಳೆ. ಕರಾಟೆಯನ್ನು ರಿತ್ವಿಕ್ ಅವರಲ್ಲಿ ಕಲಿಯುತ್ತಿದ್ದಾಳೆ. ಈಜು ಕಲಿಯುತ್ತಿದ್ದಾಳೆ. ಪ್ರಸಕ್ತ ವರ್ಷದಲ್ಲಿ 6ನೇ ತರಗತಿಗೆ ಶೈಕ್ಷಣಿಕ ಶ್ರೇಷ್ಠತೆಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ರೀತಿಯಲ್ಲಿ ಶೈಕ್ಷಣಿಕ, ಸಂಗೀತ, ಬರವಣಿಗೆ, ಶಾಸ್ತ್ರೀಯ ನೃತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಈಕೆಯನ್ನು ಹಲವಾರು ಸಂಘ ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿ ಪ್ರಶಸ್ತಿ ಪದಕಗಳನ್ನು ನೀಡಿವೆ. ಕೆಲವು ಸಭಾ ವೇದಿಕೆಗಳಲ್ಲಿ ಅತಿಥಿಯಾಗಿಯೂ ಭಾಗವಹಿಸಿರುತ್ತಾಳೆ.

LEAVE A REPLY

Please enter your comment!
Please enter your name here