ಹಿಂದೂ ಸಂಗಮ ಧರ್ಮಸಭೆ ಹಿಂದೂ ಸಂಗಮ ಆಯೋಜನ ಸಮಿತಿ ವಿಟ್ಲ ತಾಲ್ಲೂಕು ಸಜೀಪ ಮಂಡಲ ಸಜೀಪ ಮೂಡ ಸಜೀಪ ಮುನ್ನು ರು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ಸುಭಾಷ್. ನಗರ ಬೆಂಕ್ಯದಲ್ಲಿ ಜರಗಿತು.
ಗೋಪೂಜೆ ದೀಪ ಪ್ರಜ್ವಲನೆ ಹಾಗೂ ಅಧ್ಯಕ್ಷತೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಹಿಸಿ ನಮ್ಮ ಧರ್ಮ ಅಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಧರ್ಮದ ರಕ್ಷಣೆಯನ್ನು ಮಾಡುವವರನುಧರ್ಮ ಕಾಪಾಡುತ್ತದೆ ಎಂದರು ಆಶೀರ್ವಚನ ನೀಡಿದ ಒಡಿಯೂ,ರುಶ್ರೀ ಗುರುದೇವಾನಂದ ಸ್ವಾಮೀಜಿ ಭವ್ಯ ಭಾರತ ಈ ಜಗತ್ತಿನಲ್ಲಿ ವಿಶ್ವಾಸ ಹೆಚ್ಚಿಸುತ್ತಿದೆ ಸಾವಿರಾರು ವರ್ಷಗಳ ಇತಿಹಾಸ ಇರುವ ಹಿಂದೂ ಸಮಾಜ ಹಿಂದೂ ಸಂಸ್ಕೃತಿ ಹಿಂದೂ ಧರ್ಮ ಅನೇಕ ಸಂಘರ್ಷಗಳ ನಂತರ ಅವಿನಾಶಿಯಾಗಿ ಎದ್ದು ನಿಂತಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಪ್ರವೀಣ್ ಸರಳಾಯ ಮಾತನಾಡಿ ಹಿಂದೂಕೌಟುಂಬಿಕ ಮೌಲ್ಯಗಳ ಪುನರ್ಜೀವನ ,ಸಾಮಾಜಿಕ ಸಾಮರಸ್ಯದಭಾವ ಜಾಗೃತಿ .ಪರಿಸರ ಸಂರಕ್ಷಣೆ ,ಸ್ವದೇಶಿ ಜೀವನ ಶೈಲಿ,ನಾಗರಿಕ ಕರ್ತವ್ಯದ ಪಾಲನೆ ಬಗ್ಗೆ ವಿವರಿಸಿದರು.
ಕುಟುಂಬದಲ್ಲಿ ಮಹಿಳೆಯರ ಪಾತ್ರ ಎಂಬ ವಿಚಾರವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ನಿರತೆ ಬೇಬಿ ತಿಳಿ ಸಿಕೊಟ್ಟರು. ಶಿವರಂಜಿನಿ ಕಲಾತಂಡ ಬೊಕ್ಕಸ ಇವರಿಂದ ಭಾವಗೀತೆ ಹಾಗೂ ಭರತನಾಟ್ಯ ಕಾರ್ಯಕ್ರಮ ನೆರವೇರಿತು ಸಜಿಪಮುನ್ನು ರು ಯುವಕ ಸಂಘದಿಂದ ಬೇಂಕ್ಯ ತನಕ ಭವ್ಯ ಶೋಭಾ ಯಾತ್ರೆ ಜರಗಿತು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಗುತ್ತು. ಕೆ ರವೀಂದ್ರ ಕಂಬಳಿ. ಎಸ್ ಶ್ರೀಕಾಂತ್ ಶೆಟ್ಟಿ. ಜಯಪ್ರಕಾಶ್ ಪೆರ್ವ.ದಾಮೋದರ ಬಿ ಎಂ.ಮೊದಲಾದವರು ಉಪಸ್ಥಿತರಿದ್ದರು.

