ಪ್ರೀತಿಯಲ್ಲಿ ವಂಚನೆ ಆರೋಪ : ಮನನೊಂದು ಬಾಡಿಬಿಲ್ಡರ್ ಆತ್ಮಹತ್ಯೆ

0
128

ಬೆಂಗಳೂರು : ಪ್ರೀತಿಸಿದ ಯುವತಿ ಕೈಕೊಟ್ಟು ಬೇರೊಬ್ಬಾತನೊಂದಿಗೆ ಮದುವೆಗುವೆನೆಂದು ಲಗ್ನಪತ್ರಿಕೆ ಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಬಾಡಿ ಬಿಲ್ಡರ್​ ಆತ್ಮಹತ್ಯೆ ನಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನಲ್ಲಿ ನಡೆದಿದೆ.

ಮನೆಯಲ್ಲಿಯೇ ನೇಣಿಗೆ ಶರಣಾಗಿ ಕಿರಣ್(26) ಎಂಬ ಬಾಡಿಬಿಲ್ಡರ್ ಪ್ರಾಣಬಿಟ್ಟಿದ್ದಾನೆ. 3 ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾದ ಕಾರಣ, ಯುವತಿ ಹಾಗೂ ಆಕೆಯ ತಾಯಿ ಹೆಸರನ್ನು ಡೆತ್​​ನೋಟ್​​ನಲ್ಲಿ ಉಲ್ಲೇಖಿಸಿ ಕಿರಣ್​​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ತನಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಯುವತಿ ಕಿರಣ್​​ಗೆ ಹೇಳಿದ್ದಲ್ಲದೆ ಮದುವೆಯ ಆಮಂತ್ರಣ ಪತ್ರಿಕೆ, ಹೊಸ ಸೀರೆ ತೋರಿಸಿದ್ದಳು. ಇದರಿಂದ ಮನನೊಂದು ನೇರವಾಗಿ ಮನೆಗೆ ಬಂದು ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀಲೇಔಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ‌ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ‌ನಡೆಸಿ ಮನೆಯವರಿಗೆ ಒಪ್ಪಿಸಲಾಗಿದೆ.

ಹಲವು ವರ್ಷಗಳಿಂದ ಜಿಮ್​ ಟ್ರೈನರ್, ಬಾಡಿ ಬಿಲ್ಡಿಂಗ್ ಮಾಡ್ತಿದ್ದ ಕಿರಣ್, ಪ್ರಿಯತಮೆಗೆ ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡಲು ಸಹ ಸಿದ್ಧತೆ ಮಾಡಿಕೊಂಡಿದ್ದನು. ಆದರೆ ಈ ನಡುವೆ ಪ್ರೇಯಸಿ ಮತ್ತೊಬ್ಬನ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದ ಕಾರಣ ಆಘಾತಕೊಳ್ಳಗಾಗಿದ್ದ ಕಿರಣ್​​ ದುಡುಕಿನ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಿಯತಮೆ ಮದುವೆ ವಿಚಾರ ತಿಳಿದು ಬೇಸರದಲ್ಲಿ ಮನೆಗೆ ಬಂದಿದ್ದ ಕಿರಣ್​​ ನಿನ್ನೆ ಸಂಜೆ ತಾಯಿಯನ್ನ ವೈಟ್ ಶೀಟ್ ಮತ್ತು ಪೆನ್ ಕೇಳಿದ್ದರು. ಇದರಿಂದ ಅನುಮಾನಗೊಂಡ ತಾಯಿ ಯಾಕಪ್ಪಾ ವೈಟ್ ಹಾಳೆ ಎಂದು ವಿಚಾರಿಸಿದಾಗ, ಹೆದರಬೇಡಮ್ಮ ಫೈನಾನ್ಸ್ ಲೆಕ್ಕ ಬರೀತಿನಿ ಎಂದು ಕಿರಣ್​​ ಹೇಳಿದ್ದರಂತೆ. ಘಟನೆ ಸಂಬಂಧ ಯುವತಿ ಹಾಗೂ ಕುಟುಂಬಸ್ಥರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಿರಣ್ ಕುಟುಂಬಸ್ಥರು ದೂರು ನೀಡಿದ್ದು, ತನಿಖೆ ಮುಂದುವರಿದಿದೆ .

LEAVE A REPLY

Please enter your comment!
Please enter your name here