ಉಡುಪಿ : ಪಿಕಪ್ ವಾಹನ ಮೈಮೇಲೆ ಹರಿದು ದ್ವಿಚಕ್ರ ಸವಾರ ಮೃತ್ಯು

0
68

ಉಡುಪಿ : ಪಿಕಪ್ ವಾಹನ ಮೈಮೇಲೆ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಉಡುಪಿ ಎಂಜಿಎಂ ಕಾಲೇಜಿನ ಮುಂಭಾಗ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಗುರುವಾರ ಸಾಯಂಕಾಲ ಸಂಭವಿಸಿದೆ.

ಮೃತ ಸವಾರನನ್ನು ಗೋಪಾಲ್ ಸಗ್ರಿ (65) ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕ್ ನಲ್ಲಿ ಮಣಿಪಾಲ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎಂಜಿಎಂ ಕಾಲೇಜಿನ ಮುಂಭಾಗದಲ್ಲಿರುವ ಡಿವೈಡರ್ ಬಳಿ ಮತ್ತೊಂದು ಬೈಕ್ ಸವಾರನೋರ್ವ ಒಮ್ಮೇಲೆ ತಿರುವು ತೆಗೆದುಕೊಂಡು ರಸ್ತೆಗೆ ನುಗ್ಗಿದ್ದು, ಇದರಿಂದ ನಿಯಂತ್ರಣ ಕಳೆದುಕೊಂಡ ಗೋಪಾಲ್ ಅವರು ಬೈಕ್ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಹಿಂದಿನಿಂದ ಅತೀ ವೇಗವಾಗಿ ಬರುತ್ತಿದ್ದ ಪಿಕಪ್ ವಾಹನ ಗೋಪಾಲ್ ಅವರ ಮೈಮೇಲೆ ಹರಿದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here