ಉಡುಪಿ : ವೀರಹನುಮಾನ್ ರಸ್ತೆ ,ಚಿಟ್ಪಾಡಿಯಲ್ಲಿರುವ “ವಸುದೈವ ಕುಟುಂಬಕಂ ” ಎಂಬಲ್ಲಿ ಕೈವಲ್ಯ ಯೋಗ ಮತ್ತು ಆಯುರ್ವೇದಿಕ ಸೇವಾ ಟ್ರಸ್ಟ್ ನಲ್ಲಿ ದಿ :12-04-2026ರಂದು “ಆರೋಗ್ಯಧಾಮ ” ಎಂಬ ಯೋಗ ಚಿಕಿತ್ಸೆ ಮತ್ತು ಅರೋಗ್ಯ ಕೇಂದ್ರವನ್ನು ಉಡುಪಿ ಚಿಕ್ಕಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥೆಯಾದ ಡಾ .ಅನ್ನಪೂರ್ಣ ಆಚಾರ್ಯ , ಮತ್ತು ವಸುದೈವಕುಟುಂಬಕಂ ನ ವ್ಯವಸ್ಥಾಪಕ ಟ್ರಸ್ಟಿ ಶ್ರೀಕಾಂತ್ ರಾವ್ ಕೊಡಂಚ ,ಹಾಗೂ ಗೌರವ ಅಥಿತಿಗಳಾದ ಡಾ .ಸತೀಶ್ ರಾವ್ ಬಿ ಎಸ್ , ಶ್ರೀಕೃಷ್ಣ ರಾವ್ ಕೊಡಂಚ ,ಡಾ .ನಿತಿನ ಕುಮಾರ್ ಜೆ ಪಾಟೀಲ ,ಡಾ ,ಕಿರಣ್ ವಿ ಎಸ್ ಆಚಾರ್ಯ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

