ಕಾಸರಗೋಡು : 22 ನೇ “ದ್ವಿದಿನ ಸಂಕೀರ್ತನಾ ಆರಾಧನೋತ್ಸವ” ಯಶಸ್ವಿ

0
21

ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರ ಎಸ್.ವಿ.ಟಿ. ರಸ್ತೆ ಕಾಸರಗೋಡು ಈ ಸಂಸ್ಥೆಯ 22 ನೇ “ದ್ವಿದಿನ ಸಂಕೀರ್ತನಾ ಆರಾಧನೋತ್ಸವ”ವು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಭಾವೈಕ್ಯರಾದ ಸಂಗೀತ ವಿದ್ವಾನ್ ರಮಣ ಮಾಸ್ಟರ್ ಅವರ ಶುಭಾನುಗ್ರಹ ಹಾಗೂ ಶತಾಯುಷಿ ಮೃದಂಗ ವಿದ್ವಾನ್ ಬಾಬು ರೈ ಇವರ ಶುಭಾಶೀರ್ವಾದಗಳೊಂದಿಗೆ ಸಂಸ್ಥೆಯ ಸ್ಥಾಪಕರೂ ರೂವಾರಿಗಳೂ ಆದ ಕಲ್ಮಾಡಿ ಸದಾಶಿವ ಆಚಾರ್ಯ, ಕ್ಷೇತ್ರ ಸಮಿತಿ ಮುಖ್ಯಸ್ಥ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಭವನದ ರೂವಾರಿ ಡಾ| ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಸಂಪ್ರಾರ್ಥಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮ ಸಂಪನ್ನಗೊಳಿಸಿದರು.

ಕಾರ್ಯಕ್ರಮದಲ್ಲಿ ಮನಮೋಹನ ಕೆರೆಮನೆ, ಪ್ರಜಿತ್, ಶ್ರೀಧರ್ ಭಟ್, ಬಾಲರಾಜ್ ಉಪಸ್ಥಿತರಿದ್ದರು ಬಳಿಕ ಸಂಗೀತ ವಿದ್ವಾಂಸರುಗಳಿAದ ಸಂಗೀತ ಕಾರ್ಯಕ್ರಮ ಚಾಲನೆಗೊಂಡಿತು.

LEAVE A REPLY

Please enter your comment!
Please enter your name here