ಮಂಗಳೂರು : ಮೇ 31 ರಿಂದ ಜೂನ್ 6 ರ ತನಕ ಆಯೋಜಿಸಲಾಗಿರುವ ಲಕ್ಷ ದ್ವೀಪ ಪ್ರಯಾಣದ ಯಕ್ಷಧ್ರುವ ಸಮುದ್ರಯಾನದ ಉದ್ಘಾಟನೆ ಬಲ್ಲಾಲ್ ಭಾಗ್ ಬಳಿ ಇರುವ ಪತ್ತುಮುಡಿ ಸೌಧದಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಾದಾನಿಗಳು ಬರೋಡ ಶಶಿಧರ ಶೆಟ್ಟಿ ಅವರು ಯಕ್ಷಧ್ರುವ ಸಮುದ್ರಯಾನದ ಬ್ಯಾನರ್ ಅನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ಭವಾನಿ ಶಿಪ್ಪಿಂಗ್ ಸರ್ವಿಸಸ್ ಮುಂಬಯಿ ಇದರ ಸಂಪೂರ್ಣ ಸಹಕಾರದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಹಾಗೂ ತ್ರಿರಂಗ ಸಂಗಮ ಮುಂಬಯಿ ಇವರ ಸಂಯೋಜನೆಯಲ್ಲಿ, ಫೌಂಡೇಶನ್ ನ ಸದಸ್ಯರು,ಊರಿನ, ಮುಂಬಯಿಯ ಹಾಗೂ ವಿದೇಶಗಳ ಹಿತೈಷಿಗಳನ್ನು ಹಡಗಿನಲ್ಲಿ ಒಂದೆಡೆ ಸೇರಿಸಿ ಯಕ್ಷಗಾನ, ತಾಳಮದ್ದಲೆ ಸಹಿತ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬರೋಡ ಶಶಿಧರ ಶೆಟ್ಟಿ ತಿಳಿಸಿದರು.
ಮೇ 31 ರಂದು ಮಂಗಳೂರಿನಿಂದ ಮುಂಬೈಗೆ ತೆರಳಿ ಜೂನ್ 1 ರಂದು ಹಡಗಿನಲ್ಲಿ ಲಕ್ಷದ್ವೀಪಕ್ಕೆ ತೆರಳಿ ಜೂನ್ 6 ಕ್ಕೆ ಮಂಗಳೂರಿಗೆ ವಾಪಾಸು ಬರಲಾಗುವುದು. ಪ್ರಯಾಣದ ದರವನ್ನು ನಿಗದಿಗೊಳಿಸಲಾಗಿದ್ದು, ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಮುಂದಿನ ವರ್ಷ ವಿಮಾನಯಾನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಉದ್ಯಮಿ ಬರೋಡ ಶಶಿಧರ ಶೆಟ್ಟಿ ತಿಳಿಸಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ ಯಕ್ಷಧ್ರುವ ಸಮುದ್ರಯಾನ ಬರೋಡ ಶಶಿಧರ ಶೆಟ್ಟಿಯವರ ಕಲ್ಪನೆಯಾಗಿದೆ ಎಂದರು. ಸಮುದ್ರಯಾನದಲ್ಲಿ ಟ್ರಸ್ಟ್ ನ ಮಹಾದಾನಿಗಳಾದ ಡಾ. ಕನ್ಯಾನ ಸದಾಶಿವ ಶೆಟ್ಟಿ, ಎಂಆರ್ ಜಿ ಗ್ರೂಪ್ ನ ಎಂಡಿ ಡಾ. ಕೆ ಪ್ರಕಾಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ನ ಆಡಳಿತ ನಿರ್ದೇಶಕರಾದ ಕುಸುಮೋದರ ಡಿ ಶೆಟ್ಟಿ ಸಹಿತ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಸಮುದ್ರಯಾನದ ಕುರಿತು ತ್ರಿರಂಗ ಸಂಗಮದ ಸಂಚಾಲಕ ಕರ್ನೂರು ಮೋಹನ್ ರೈ ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಮಾಹಿತಿ ನೀಡಿದರು. ಸಮುದ್ರಯಾನದಲ್ಲಿ ಭಾಗವಹಿಸುವವರು ಪ್ರದೀಪ್ ಆಳ್ವ ಕದ್ರಿ 9964279525 ಅಥವಾ ಕರ್ನೂರು ಮೋಹನ್ ರೈ 9867304757 ಅವರನ್ನು ಸಂಪರ್ಕಿಸ ಬಹುದಾಗಿದೆ.
ಮೇ 30 ಕ್ಕೆ ಪಟ್ಲ ಸಂಭ್ರಮ : ಮೇ 30 ರಂದು 11 ನೇ ವರ್ಷದ “ಪಟ್ಲ ಸಂಭ್ರಮ” ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಕುರಿತು ರೂಪುರೇಷೆಗಳನ್ನು ಸಿದ್ದಪಡಿಸಿ, ಎಲ್ಲಾ ಘಟಕಗಳಿಗೂ ಜವಾಬ್ದಾರಿ ನೀಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಕಲಾವಿದರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ 15 ಲಕ್ಷ ರೂಪಾಯಿಗಳನ್ನು ವಿತರಿಸಲಾಯಿತು. ಪೂರ್ವಭಾವಿ ಸಭೆಗೆ ಪ್ರಾದೇಶಿಕ ಘಟಕಗಳ 350ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ಬಹಳ ವಿಶೇಷವಾಗಿತ್ತು.
ಸಭೆಯಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸರಪಾಡಿ ಅಶೋಕ ಶೆಟ್ಟಿ, ಪ್ರಭಾಕರ ಜೋಷಿ, ಭುಜಬಲಿ ಮೊದಲಾದವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

