ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ದಿನಾಂಕ 07-8-2026 ರಂದು ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇಲ್ಲಿ 2026-27 ನೇ ಸಾಲಿನ ಜಿಲ್ಲಾ ಮಟ್ಟದ ಮೊದಲ ಹಂತದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಸಂಸ್ಥೆಯ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ರೋ.ಅವಿಲ್ ಡಿಸೋಜ, ಸ್ಕೂಲ್ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಬ್ ಮತ್ತು ಬುಲ್ ಬುಲ್ ಚಟುವಟಿಕೆಗಳು ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ಉತ್ತಮ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಅಧ್ಯಕ್ಷತೆಯನ್ನು ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇಲ್ಲಿನ ಸಂಚಾಲಕರ ಪ್ರವೀಣ್ ಚಂದ್ರ ಜೈನ್ ಇವರು ವಹಿಸಿ ಕಬ್ ಬುಲ್ ಬುಲ್ ಪರೀಕ್ಷಾರ್ಥಿಗಳಿಗೆ ಶಿಸ್ತಿನ ಮಹತ್ವವನ್ನು ಹೇಳಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಹಿಂದಿ ಪ್ರಚಾರಕಿ ವೇದಾವತಿ ಅವರನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಹಿಂದಿ ಪ್ರಚಾರಸಭಾ ಪರೀಕ್ಷೆಗಳ ಪ್ರಮಾಣಪತ್ರ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಬ್ ಬುಲ್ ಬುಲ್ ಪರೀಕ್ಷಾರ್ಥಿಗಳಿಗೆ ಶಿಸ್ತಿನ ಪ್ರಾಮುಖ್ಯತೆಯ ಬಗ್ಗೆ ಕಿವಿ ಮಾತುಗಳನ್ನು ಹೇಳಿ ಪರೀಕ್ಷೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ನಿಯಮ ಹಾಗೂ ದಿನದ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಸಹಾಯಕ ಆಯುಕ್ತರಾದ ತಿಲಕಾ ಅನಂತ ವೀರ್ ಜೈನ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಪರೀಕ್ಷಾ ಶಿಬಿರದ ಸಂದರ್ಭದಲ್ಲಿ ರಾಜ್ಯ ಮುಖ್ಯ ಆಯುಕ್ತರಾದ ಡಾ.ಪಿ.ಜಿ ಆರ್ ಸಿಂಧ್ಯ,ರಾಜ್ಯ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ್ ಭಟ್,ರೋಟರಿ ಎಜುಕೇಶನ್ ಸೊಸೈಟಿ ಮೂಡುಬಿದಿರೆ ಇಲ್ಲಿನ ಅಧ್ಯಕ್ಷರಾದ ಶ್ರೀ ನಾರಾಯಣ ಪಿ ಎಂ ಇವರು ಭೇಟಿ ನೀಡಿ ಶುಭ ಹಾರೈಸಿದರು.
ಕಬ್ ವಿಭಾಗದ ನಾಯಕರಾಗಿ ಭಾರತಿ ನಾಯಕ್ LT, ಸಹಾಯಕರಾಗಿ ಪೂರ್ಣಿಮಾ Pre ALT, ಕವಿತಾ ಕೆ,ಶ್ರೀಮತಿ ಜಯಶ್ರೀ,ಸೀಮಾ,ದೀಪಿಕಾ,ಸವಿತಾ, ಶ್ರೀಜಾ,ಬುಲ್ ಬುಲ್ ವಿಭಾಗದ ನಾಯಕಿಯಾಗಿ ಸಂಧ್ಯಾ ALT, ಸಹಾಯಕರಾಗಿ ಜಾನ್ವಿ,ರೂಪ,ಸುರೇಖಾ ಎಚ್,ರಂಜಿತಾ,ಜಯಶ್ರೀ ರೈ,ನಯನ,ಸುರೇಖಾ ಇವರು ಸಹಕರಿಸಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇಲ್ಲಿನ ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ , ಮ್ಯಾನೇಜರ್ ಸತೀಶ್, ಶಿಕ್ಷಕ ಬಳಗ, ಸಿಬ್ಬಂದಿ ವರ್ಗ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಂಪೂರ್ಣ ಸಹಕಾರವನ್ನು ನೀಡಿದರು.
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆ, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಡಾl ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ, ತೊಕೂರು,ಆಳ್ವಾಸ್ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ,ಆಳ್ವಾಸ್ ಕೇಂದ್ರೀಯ ಶಾಲೆ, ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರು,ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ, ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
89 ಕಬ್ಸ್ ಮತ್ತು 88 ಬುಲ್ ಬುಲ್ಸ್ ಒಟ್ಟು 177 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದರು. ವಿನಯ ಗೈಡ್ ಕ್ಯಾಪ್ಟನ್ ಕಾರ್ಯಕ್ರಮವನ್ನು ನಿರೂಪಿಸಿ,ಶ್ರೀ ಮೋಹನ್ HWB (S) ಧನ್ಯವಾದವಿತ್ತರು.

