
ಭಾರತೀಯ ಸೇನೆಯು ಅವಕಾಶವನ್ನು ನೀಡಿದೆ. ಅಗ್ನಿವೀರ್ ನೇಮಕಾತಿ 2026ರ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಈ ಬಾರಿ 25,000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರ ನೋಂದಣಿ ಪ್ರಕ್ರಿಯೆಯು ಫೆಬ್ರವರಿ 13, 2026 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 1, 2026 ರವರೆಗೆ ನಡೆಯಲಿದೆ.
ಈ ನೇಮಕಾತಿಯ ಮೂಲಕ ಯುವಕರಿಗೆ ನಾಲ್ಕು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಇಲ್ಲಿ ಅವರಿಗೆ ತರಬೇತಿ, ವೇತನ ಮತ್ತು ಭವಿಷ್ಯಕ್ಕಾಗಿ ಆರ್ಥಿಕ ಬೆಂಬಲವೂ ದೊರೆಯಲಿದೆ.
ಈ ಬಾರಿಯ ಅಗ್ನಿವೀರ್ ನೇಮಕಾತಿಯಲ್ಲಿ ವಿವಿಧ ವಿಭಾಗಗಳನ್ನು ಸೇರಿಸಲಾಗಿದೆ :
*ಅಗ್ನಿವೀರ್ ಜನರಲ್ ಡ್ಯೂಟಿ (GD)
*ಅಗ್ನಿವೀರ್ ಟೆಕ್ನಿಕಲ್
*ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್
*ಅಗ್ನಿವೀರ್ ಟ್ರೇಡ್ಸ್ಮನ್ (10ನೇ ಮತ್ತು 8ನೇ ತರಗತಿ)
*ಸೋಲ್ಜರ್ ಫಾರ್ಮಾ
*ಸೋಲ್ಜರ್ ಟೆಕ್ನಿಕಲ್ (ನರ್ಸಿಂಗ್ ಅಸಿಸ್ಟೆಂಟ್)
ಮಹಿಳಾ ಮಿಲಿಟರಿ ಪೊಲೀಸ್ ಅಂದರೆ 10ನೇ, 12ನೇ ತರಗತಿ ಉತ್ತಿರ್ಣರಾದವರಿಂದರಿಂದ ಹಿಡಿದು ತಾಂತ್ರಿಕ ಹಿನ್ನೆಲೆ ಹೊಂದಿರುವ ಯುವಕ-ಯುವತಿಯರಿಗೆ ಪ್ರತ್ಯೇಕ ಅವಕಾಶಗಳಿವೆ.
ಅಗ್ನಿವೀರ್ ವೇತನದ ವಿವರ
ಅಗ್ನಿವೀರ್ಗಳಿಗೆ ಸಿಗುವ ವೇತನ ಶ್ರೇಣಿ ಈ ಕೆಳಗಿನಂತಿದೆ :
* ಮೊದಲ ವರ್ಷ: ಪ್ರತಿ ತಿಂಗಳು ₹30,000
* ಪ್ರತಿ ವರ್ಷ: ಸಂಬಳದಲ್ಲಿ ₹5,000 ಹೆಚ್ಚಳವಾಗಲಿದೆ.
* ನಾಲ್ಕನೇ ವರ್ಷದ ವೇಳೆಗೆ: ₹40,000 ಪ್ರತಿ ತಿಂಗಳು.
ಕೈಗೆ ಸಿಗುವ ಸಂಬಳ (In-hand Salary): ಅಗ್ನಿವೀರ್ ಕಾರ್ಪಸ್ ಫಂಡ್ ಮೊತ್ತವನ್ನು ಕಡಿತಗೊಳಿಸಿದ ನಂತರ:
* ಮೊದಲ ವರ್ಷ: ಸುಮಾರು ₹21,000
* ನಾಲ್ಕನೇ ವರ್ಷ: ಸುಮಾರು ₹28,000
ಆಯ್ಕೆಯು ಮೂರು ಹಂತಗಳಲ್ಲಿ ನಡೆಯುತ್ತದೆ :
CBT / CEE ಪರೀಕ್ಷೆ: ಸಾಮಾನ್ಯ ಜ್ಞಾನ, ಗಣಿತ, ರೀಸನಿಂಗ್, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಪರೀಕ್ಷೆ.
ನೇಮಕಾತಿ ರ್ಯಾಲಿ (Physical Test): ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ದೈಹಿಕ ಪರೀಕ್ಷೆ ಇರುತ್ತದೆ. ಇದರಲ್ಲಿ :
* 1.6 ಕಿಲೋಮೀಟರ್ ಓಟ
* ಪುಲ್-ಅಪ್ಸ್ (Pull-ups)
* 9 ಅಡಿ ಗುಂಡಿ ಜಿಗಿಯುವುದು
* ಜಿಗ್-ಜಾಗ್ ಬ್ಯಾಲೆನ್ಸ್
ದಾಖಲೆ ಮತ್ತು ವೈದ್ಯಕೀಯ ತಪಾಸಣೆ: ಅಂತಿಮವಾಗಿ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು , ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ :
ಶೈಕ್ಷಣಿಕ ದಾಖಲೆಗಳು: 10ನೇ ತರಗತಿ (SSLC) ಮತ್ತು 12ನೇ ತರಗತಿಯ ಅಂಕಪಟ್ಟಿಗಳು
ವೈಯಕ್ತಿಕ ವಿವರ: ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
ಆಧಾರ್ ಕಾರ್ಡ್: ಗುರುತಿನ ಚೀಟಿ ಮತ್ತು ವಿಳಾಸದ ಪುರಾವೆಗಾಗಿ.
ಭಾವಚಿತ್ರ : ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ (ಜೆಪಿಜಿ ಫಾರ್ಮ್ಯಾಟ್ನಲ್ಲಿ, 5kb ನಿಂದ 20kb ಒಳಗೆ).
ಸಹಿ : ಬಿಳಿ ಹಾಳೆಯ ಮೇಲೆ ಮಾಡಿದ ಸಹಿಯ ಸ್ಕ್ಯಾನ್ ಪ್ರತಿ (5kb ನಿಂದ 10kb ಒಳಗೆ).
ನಿವಾಸಿ ದೃಢೀಕರಣ : ನೀವು ಕರ್ನಾಟಕದವರು ಎಂದು ಸಾಬೀತುಪಡಿಸಲು ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ.
ಜಾತಿ ಪ್ರಮಾಣಪತ್ರ: ಅನ್ವಯವಾಗುವಲ್ಲಿ.
ಅರ್ಜಿ ಸಲ್ಲಿಸುವ ಹಂತಗಳು, ನೀವು ಸ್ವತಃ ಅಥವಾ ಸೈಬರ್ ಸೆಂಟರ್ ಮೂಲಕ ಈ ಕೆಳಗಿನಂತೆ ಅರ್ಜಿ ಸಲ್ಲಿಸಬಹುದು:
ವೆಬ್ಸೈಟ್ಗೆ ಭೇಟಿ ನೀಡಿ : ಮೊದಲು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ joinindianarmy.nic.in ಗೆ ಹೋಗಿ.
ಕ್ಯಾಪ್ಚಾ ಎಂಟ್ರಿ : ವೆಬ್ಸೈಟ್ ತೆರೆಯಲು ಅಲ್ಲಿ ಕಾಣುವ ಸಂಖ್ಯೆಗಳನ್ನು (Captcha) ನಮೂದಿಸಿ ಎಂಟರ್ ಮಾಡಿ.
ಅಗ್ನಿಪಥ್ ಟ್ಯಾಬ್ : ಮುಖಪುಟದಲ್ಲಿರುವ ‘Agpath’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನೋಂದಣಿ : ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ ‘User Registration’ ಕ್ಲಿಕ್ ಮಾಡಿ. ನಿಮ್ಮ ಆಧಾರ್ ವಿವರ ಮತ್ತು ವೈಯಕ್ತಿಕ ಮಾಹಿತಿ ನೀಡಿ ಓಟಿಪಿ (OTP) ಮೂಲಕ ನೋಂದಾಯಿಸಿಕೊಳ್ಳಿ.
ಲಾಗಿನ್ (Login) : ನೋಂದಣಿ ಮುಗಿದ ನಂತರ ನಿಮ್ಮ ಯೂಸರ್ ನೇಮ್ (ಇಮೇಲ್) ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
ಅರ್ಹತೆ ಪರೀಕ್ಷಿಸಿ : ನಿಮ್ಮ ವಯಸ್ಸು ಮತ್ತು ವಿದ್ಯಾರ್ಹತೆಗೆ ಅನುಗುಣವಾಗಿ ಯಾವ ಹುದ್ದೆಗಳು (GD, Technical, etc.) ಲಭ್ಯವಿವೆ ಎಂದು ಪರೀಕ್ಷಿಸಿ ‘Apply’ ಬಟನ್ ಒತ್ತಿ.
ಮಾಹಿತಿ ಭರ್ತಿ : ನಿಮ್ಮ ವಿಳಾಸ, ಶಿಕ್ಷಣದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಫೋಟೋ ಅಪ್ಲೋಡ್ : ನಿಮ್ಮ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
ಶುಲ್ಕ ಪಾವತಿ : ನಿಗದಿತ ಪರೀಕ್ಷಾ ಶುಲ್ಕವನ್ನು ಆನ್ಲೈನ್ (UPI, Net Banking) ಮೂಲಕ ಪಾವತಿಸಿ.
ಪ್ರಿಂಟ್ ಔಟ್ : ಕೊನೆಯಲ್ಲಿ ಅರ್ಜಿಯನ್ನು ‘Submit’ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ಸೂಚನೆಗಳು
*ಅರ್ಜಿ ಶುಲ್ಕ : ಅಗ್ನಿವೀರ್ ಪರೀಕ್ಷೆಗೆ ಸುಮಾರು ₹250/- ಅರ್ಜಿ ಶುಲ್ಕವಿರುತ್ತದೆ (ಇದು ಬದಲಾಗಬಹುದು, ಅಧಿಕೃತವಾಗಿ ಗಮನಿಸಿ).
* ದೈಹಿಕ ಕ್ಷಮತೆ: ಅರ್ಜಿ ಸಲ್ಲಿಸಿದ ನಂತರ ಕೇವಲ ಓದುವುದಷ್ಟೇ ಅಲ್ಲದೆ, ಪ್ರತಿದಿನ ಬೆಳಿಗ್ಗೆ ಓಟ ಮತ್ತು ವ್ಯಾಯಾಮದ ತರಬೇತಿ ಆರಂಭಿಸಿ.
ಸಹಾಯವಾಣಿ: ನಿಮಗೆ ಅರ್ಜಿ ಸಲ್ಲಿಸುವಾಗ ಏನಾದರೂ ತೊಂದರೆಯಾದರೆ ಸೇನೆಯ ಅಧಿಕೃತ ವೆಬ್ಸೈಟ್ನಲ್ಲಿರುವ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
