ಪರಂಪರಾ 2026 – ಎಸ್. ಎನ್. ಎಂ. ಪಿ. ಯೂತ್ ಫೆಸ್ಟ್

0
14

ಮೂಡಬಿದಿರೆಯ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ಕಿನ ಏಳು ವಿಭಾಗೀಯ ಸಂಘಗಳ ಸಹಭಾಗಿತ್ವದಲ್ಲಿ ಶ್ರೀ ಮಹಾವೀರ ಕಾಲೇಜ್ ಕ್ಯಾಂಪಸ್ಸಿನ ವಿದ್ಯಾರ್ಥಿಗಳಿಗಾಗಿ ಯುವ ಉತ್ಸವವನ್ನು ದಿನಾಂಕ 16-2-2026 ಸೋಮವಾರದಂದು ಶ್ರೀ ಮಹಾವೀರ ಕಾಲೇಜು ಆವರಣದ ಜಿ. ವಿ.ಪೈ `ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಇದರ ಅಂಗವಾಗಿ ‘ಸ್ವಾದಂ’ ಆಹಾರೋತ್ಸವ, ‘ಕ್ರೀಡೋತ್ಸವ’ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡಾಕೂಟ, ‘ವಿವಿಧ ವಿನೋದ’ ಕಲಾಕೃತಿಗಳ ಪ್ರದರ್ಶನ, ಟ್ರೆಷರ್ ಹಂಟ್, ಸ್ಪರ್ಧೆ, ಕೆರೋಕೆ ಗಾಯನ ಸ್ಪರ್ಧೆ ಹಾಗೂ ರೀಲ್ಸ್ ತಯಾರಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸ್ಪರ್ಧೆಗಳಲ್ಲಿ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್, ಶ್ರೀ ಮಹಾವೀರ (ಪದವಿ) ಕಾಲೇಜು, ಶ್ರೀ ಮಹಾವೀರ ಪದವಿಪೂರ್ವ ಕಾಲೇಜು, ಎ. ಜಿ. ಸೋನ್ಸ್ ಐಟಿಐ, ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಪೂರ್ವಾಹ್ನ ಗಂಟೆ 10.30ಕ್ಕೆ ಈ ಉತ್ಸವವನ್ನು ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದು, ಉಪಾಧ್ಯಕ್ಷರಾದ ಎಸ್. ಡಿ. ಸಂಪತ್ ಸಾಮ್ರಾಜ್ಯ ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರು ಹಾಗೂ ಪ್ರಾಂಶುಪಾಲರು ಪಾಲ್ಗೊಳ್ಳಲಿದ್ದಾರೆ, ಸಂಜೆ 4 ಗಂಟೆಯ ವರೆಗೆ ಈ ಉತ್ಸವ ಜರಗಲಿದೆ.

ಸಾರ್ವಜನಿಕರಿಗೂ ಈ ಉತ್ಸವವನ್ನು ವೀಕ್ಷಿಸಲು ಅವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here