ಶ್ರೀ ನಾಗ ಬ್ರಹ್ಮ ಕ್ಷೇತ್ರಪಾಲ ಸಹಪರಿವಾರ ದೈವಸ್ಥಾನ 20ನೇ ವರ್ಷದ ವರ್ಧಂತಿ ಉತ್ಸವ ಹಾಗೂ 14ನೇ ವರ್ಷದ ಶಿವರಾತ್ರಿ ಜಾಗರಣೆ

0
13

ಶ್ರೀ ನಾಗ ಬ್ರಹ್ಮ ಕ್ಷೇತ್ರಪಾಲ ಸಹಪರಿವಾರ ದೈವಸ್ಥಾನ 20ನೇ ವರ್ಷದ ವರ್ಧಂತಿ ಉತ್ಸವ ಹಾಗೂ 14ನೇ ವರ್ಷದ ಶಿವರಾತ್ರಿ ಜಾಗರಣೆ ಕಾರ್ಯಕ್ರಮವು ಬಾರಿ ಅದ್ದೂರಿಯಾಗಿ ಜರಗಿತ್ತು. ದಿನಾಂಕ14/02/2026
ಶನಿವಾರದಂದು ಕ್ಷೇತ್ರಪಾಲ ಹಾಗೂ ಪಂಜುರ್ಲಿ ದೈವದ ಸಿರಿ ಸಿಂಗಾರ ನೇಮೋತ್ಸವ ಜರಗಿತ್ತು.


ಹಾಗೂ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಪ್ರಸಾದವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾದರು . ಹಾಗೂ ಧಾರ್ಮಿಕ ಕಾರ್ಯಕ್ರಮ ಜರಗಿತ್ತು. ಹಾಗೂ ಪ್ರಮುಖ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತ್ತು.


ಪ್ರಮುಖವಾಗಿ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನಮ್ಮ ಉಡುಪಿ ಟಿವಿ ಪ್ರವರ್ತಕರು ಹಾಗೂ ತುಳುನಾಡು ವಾರ್ತೆ ವರದಿಗಾರರಾದ ವಿನೋದ್ ಶೆಟ್ಟಿ ಅವರಿಗೆಹಾಗೂ ಶ್ರೀಮತಿ ಅಶ್ವಿನಿ ಶ್ರೀಧರ್ ಪೂಜಾರಿ ಅನಿಲ್ ರೋಡ್ರಿ ಗೆಸ್ ಸೋಮ ಪೂಜಾರಿ ರಾಧು ಪೂಜಾರಿ ಈ ಒಂದು ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದಿನಾಂಕ 15/02/2026 ಆದಿತ್ಯವಾರದಂದು ಸಂಜೆ ಕ್ಷೇತ್ರಪಾಲ ಭಜನೆ ತಂಡ ಹಾಗೂ ಬೈಕಾಡಿ ಮಹಿಳಾ ಭಜನೆ ಮಂಡಳಿಯಿಂದ ಕುಣಿತ ಭಜನೆ ತದನಂತರ ಬಹುಮಾನ ವಿತರಣೆ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಂತರ ಶಿವನಂದ ಬಳಗ ಗದಗ ಇವರಿಂದ ಮುಂಜಾನೆಯವರೆಗೆ ಭಜನೆ ಜಾಗರಣೆ ಕಾರ್ಯಕ್ರಮ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರಗಿತ್ತು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here