ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ.) ಕಲ್ಲಬೆಟ್ಟು, ರೋಟರಿ ಕ್ಲಬ್ ಮೂಡುಬಿದಿರೆ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಜಂಟಿ ಆಶ್ರಯದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಆರೋಗ್ಯ ಮತ್ತು ಅಪಘಾತ ವಿಮಾ ಶಿಬಿರ ಹಾಗೂ ರಕ್ತದಾನ ಶಿಬಿರ
ಅಕ್ಷಯಧಾಮ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ.) ಕಲ್ಲಬೆಟ್ಟು, ರೋಟರಿ ಕ್ಲಬ್ ಮೂಡುಬಿದಿರೆ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಜಂಟಿ ಆಶ್ರಯದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಆರೋಗ್ಯ ಮತ್ತು ಅಪಘಾತ ವಿಮಾ ಶಿಬಿರ ಹಾಗೂ ರಕ್ತದಾನ ಶಿಬಿರವು ಜರಗಿತು. ಈ ಕಾರ್ಯಕ್ರಮವನ್ನು ಶ್ರೀ ಗಣೇಶ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್‌ರವರು ಉದ್ಘಾಟಿಸಿದರು. ಕಳೆದ 24 ವರ್ಷಗಳಿಂದ ಗಣೇಶ ಸೇವಾ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಮೂಡುಬಿದಿರೆ ರೋಟರಿ ಕ್ಲಬ್ ಮತ್ತು ಆಳ್ವಾಸ್ ಹೆಲ್ತ್ ಸೆಂಟರ್ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರರಿಗೆ ನಿರಂತರವಾಗಿ ಪ್ರೋತ್ಸಾಹ ನೀಡುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್‌ನ 2025-26 ರ ಅಧ್ಯಕ್ಷರಾದ ಡಾ| ಆರ್ಶೀವಾದ್, ಕಾರ್ಯದರ್ಶಿ ಪ್ರಜ್ಚಲ್ ಆಚಾರ್, ಹಿರಿಯ ರೋಟರಿ ಸದಸ್ಯ ಜಯರಾಮ್ ಕೋಟ್ಯಾನ್, ಆಳ್ವಾಸ್ ಹೆಲ್ತ್ ಸೆಂಟರ್ ಡಾ| ವಿನಯ್ ಚಂದ್ರ, ಅಂಚೆ ಕಚೇರಿಯ ಗುರುಪ್ರಸಾದ್ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಸ್ವರ್ಣಗೌರಿ ಮಾತೃಮಂಡಳಿಯ ಕಾರ್ಯದರ್ಶಿ ವೀಣಾ ಪೈ ಹಾಗೂ ಟ್ರಸ್ಟೀ ಜಿ.ಕೆ ಭಟ್ ಉಪಸ್ಥಿತರಿದ್ದರು. ಅಂಚೆ ಇಲಾಖೆ ಹೊಸ ಆಧಾರ್ ನೋಂದಣಿ, ಅಪಘಾತ ವಿಮೆ ಮತ್ತು ಇತರ ಸೌಲಭ್ಯಗಳನ್ನು ಸಾರ್ವಜನಿಕರು ಪಡೆದುಕೊಂಡರು. 32 ಮಂದಿ ಯುವಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ಕೇಶವ ಹೆಗ್ಡೆ ಸ್ವಾಗತಿಸಿದರು. ಟ್ರಸ್ಟಿನ ಕಾರ್ಯದರ್ಶಿ ಸುಧೀರ್ ಪೈ ಧನ್ಯವಾದವಿತ್ತರು.

