ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೇಕಾಗಿದೆ – ಡಿ.ಆರ್.ನಾಯ್ಕ

0
6

ದಾವಣಗೆರೆ : ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆಗೆ ಭಯ ಪಡಬೇಕಾಗಿಲ್ಲ ಕರ್ತವ್ಯ ನಿಷ್ಠೆಯಿಂದ, ಸಮಯಪ್ರಜ್ಞೆಯೊಂದಿಗೆ, ಪೂರ್ವ ಸಿದ್ಧತೆಯೊಂದಿಗೆ ಪರೀಕ್ಷೆ ಬರೆದರೆ ಒಳ್ಳೆಯ ಫಲಿತಾಂಶ ಬಂದೇ ಬರುತ್ತದೆ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೇಕಾಗಿದೆ ಎಂದು ಶಿರಸಿಯ ಶಿಕ್ಷಣ ಕ್ಷೇತ್ರದ ಉಪನಿರ್ದೇಶಕರಾದ ಡಿ.ಆರ್.ನಾಯ್ಕ ಅನಿಸಿಕೆಗಳನ್ನು ಹಂಚಿಕೊಂಡರು.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಲಾಕುಂಚ ಶಾಖೆ ಹಾಗೂ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವಬಾವಿ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಶಿರಸಿಯ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳಾದ ಕುಮಾರಿ ಗೀತಾ ಪಾಟೀಲ್‌ರವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಎಸ್.ಎಸ್.ಎಲ್.ಸಿ. ಶಿಕ್ಷಣ ಹಂತ ಮಕ್ಕಳ ಜೀವನದ ಒಂದು ತಿರುವು ನರ‍್ಲಕ್ಷ ಉದಾಸೀನತೆ ಬಿಟ್ಟು ವಿದ್ಯಾಭ್ಯಾಸದ ಕಡೆ ಗುರಿ ಇಟ್ಟು ಮಕ್ಕಳು ಮುಂದಿನ ಸಾಧನೆಗಳಿಗೆ ಈಗಲೇ ಸಂಕಲ್ಪ ಮಾಡಿ ಮುಂದಿನ ಭವ್ಯ ದಿವ್ಯ ಭವಿಷ್ಯಕ್ಕೆ ನಾಂದಿಯಾಗುತ್ತದೆ. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕೇರಳ ರಾಜ್ಯ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ಶಿರಸಿಯ ಶಾಖೆಯಾಗಿದ್ದು ತುಂಬಾ ತುಂಬಾ ಸಂತೋಷವಾಯಿತು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್‌ನಾಯ್ಕ ರವರು ಮಾತನಾಡಿ, ಯಾವ ಸಂಘ ಸಂಸ್ಥೆಗಳು ಮಾಡದೇ ಇದ್ದ ಮಕ್ಕಳ ಪರೀಕ್ಷೆ ಎದುರಿಸಲು ಧೈರ್ಯ ತುಂಬುವ ಉತ್ತೇಜನ ನೀಡಿ ಉತ್ತಮ ಫಲಿತಾಂಶ ತರುವ ಹಂತದಲ್ಲಿ ಈ ಉಚಿತ ಕಾರ್ಯಾಗಾರ ಮಾಡುತ್ತಿರುವುದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಒಂದೇ. ಶೈಕ್ಷಣಿಕ ಕಾಳಜಿಯೊಂದಿಗೆ ಈ ತರಬೇತಿ ನೀಡಿದ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಕಾಯಕ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಶಿರಸಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ನಾಯ್ಕ, ದಾವಣಗೆರೆಯ ಕಲಾಕುಂಚ ನೂತನ ಅಧ್ಯಕ್ಷರಾದ ವಾಸುದೇವ ಎಲ್.ರಾಯ್ಕರ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕಲಾಕುಂಚ ಮಹಿಳಾ ವಿಭಾಗದ ಸಮಿತಿ ಸದಸ್ಯರಾದ ಶಿಲ್ಪಾ ಉಮೇಶ್, ಶಿರಸಿಯ ಕಲಾಕುಂಚ ಶಾಖೆಯ ನೂತನ ಅಧ್ಯಕ್ಷರಾದ ಆಶಾ ಅರುಣ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಹೆಗಡೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ವಿಜೃಂಭಣೆಯ ಸಮಾರಂಭಕ್ಕೆ ಶಿರಸಿಯ ಶಾಖೆಯ ಅಧ್ಯಕ್ಷರಾದ ಆಶಾ ಅರುಣ್ ಪೈ ಸ್ವಾಗತಿಸಿದರು, ಸಂಸ್ಥೆಯ ಗೌರವ ಅಧ್ಯಕ್ಷರಾದ ರವಿ ಹೆಗಡೆ ಗಡಿಹಳ್ಳಿ, ಅಚ್ಚು ಕಟ್ಟಾಗಿ ನಿರೂಪಿಸಿದರು.

ಸಾಲಿಗ್ರಾಮ ಗಣೇಶ್ ಶೆಣೈಯವರು ಪರೀಕ್ಷೆಯ ಪೂರ್ವಬಾವಿ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರ ನಡೆಸಿಕೊಟ್ಟು ಮುಖ್ಯೋಪಾಧ್ಯಾಯರ, ಶಿಕ್ಷಕರ, ಶಿಕ್ಷಕಿಯರ ಅನುಮತಿ ಪಡೆದು ಪ್ರತೀಜ್ಞಾವಿಧಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕೊನೆಯಲ್ಲಿ ಕವಿತಾ ಪಟಗಾರ ವಂದಿಸಿದರು. ಕಲಾಕುಂಚ ಶಿರಸಿಯ ಶಾಖೆಯ ನೂತನ ಅಧ್ಯಕ್ಷರಾದ ಆಶಾ ಅರುಣ್ ಪೈ ಯವರಿಗೆ ಕಲಾಕುಂಚದಿಂದ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here