ಭಜನೆಗೆ ಅದ್ಭುತ ಶಕ್ತಿ : ಪ್ರತಾಪಸಿಂಹ
ಹೆಬ್ರಿ : ಭಜನೆಗೆ ಇರುವ ಅದ್ಭುತ ಶಕ್ತಿಯನ್ನು ಸೂರಿಮಣ್ಣು ಮಠ ತೋರಿಸಿಕೊಟ್ಟಿದೆ. ಭಜನೆಯಿಂದ ಹಿಂದುತ್ವ ಉಳಿದಿದೆ. ಹಿಂದುತ್ವ ಮತ್ತು ಭಜನೆಗೆ ವಿಶೇಷ ಸಂಬಂಧವಿದೆ. ಅತ್ಯಂತ ಗ್ರಾಮೀಣ ಪ್ರದೇಶವಾದ ಸೂರಿಮಣ್ಣಿನಲ್ಲಿ ೮ ದಿನಗಳ ಸಂಭ್ರಮ ಯಶಸ್ವಿಯಾಗಿ ನಡೆದಿರುವುದು ವಿಶೇಷವಾಗಿದೆ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು. ಅವರು ಭಾನುವಾರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು. ಬಿಜೆಪಿ ನಾಯಕ ಶಿವಪುರ ಸುರೇಶ ಶೆಟ್ಟಿ ಸಹಿತ ಗಣ್ಯರು ಹಾಜರಿದ್ದರು.
