ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ

0
55

ಅಮೃತಸರ: ಪಂಜಾಬ್​​ನ ತರಣ್ ತರಣ್​ನಲ್ಲಿ ನಡೆದ ರಾಜಮನೆತನದ ವಿವಾಹವೊಂದು ಎಲ್ಲರ ಗಮನ ಸೆಳೆದಿದೆ. ವರ ವಧುವಿನ ಮೇಲೆ ಬರೋಬ್ಬರು 8 ಕೋಟಿ ರೂ. ಮೌಲ್ಯದ ನೋಟುಗಳ ಸುರಿಮಳೆಗೈದಿದ್ದಾನೆ. ಎಲ್ಲರೂ ಅಚ್ಚರಿಯಿಂದ ಈ ದೃಶ್ಯ ವೀಕ್ಷಿಸಿದ್ದಾರೆ. ಅಲ್ಲಿದ್ದ ಅತಿಥಿಗಳು ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾದರು. ಕೆಲವರು ಇದನ್ನು ರಾಜಮನೆತನದ ಪದ್ಧತಿ ಎಂದು ಕರೆದರೆ, ಇನ್ನು ಕೆಲವರು ಇದನ್ನು ಆಡಂಬರ ಎಂದು ಕರೆದಿದ್ದಾರೆ.

ಕೋಟ್ಯಂತರ ರೂಪಾಯಿಯ ಸುರಿಮಳೆ ಇದು ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಾರಂಭವಾದವು. ಬಳಿಕ ಡಿಜೆ ಆಪರೇಟರ್  ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸುಮಾರು 3 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಹೆಚ್ಚಿನ ನೋಟುಗಳು ಹತ್ತು ರೂಪಾಯಿಗಳದ್ದಾಗಿದ್ದವು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here