ಫೆ.22 : ‘ಸ್ತ್ರೀ’ ಪರಿಕಲ್ಪನೆಯ ವಿನೂತನ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ

0
8

ಫೆಬ್ರವರಿ22ರ ಸಂಜೆ ಅಂಬೇಡ್ಕರ್‌ ಭವನದ ಸಭಾಂಗಣದಲ್ಲಿ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್‌ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸ್ತ್ರೀ’ ಪರಿಕಲ್ಪನೆಯ ವಿನೂತನ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ

ಮAಗಳೂರಿನ ಸಂಗೀತ ಭಾರತಿ ಫೌಂಡೇಶನ್(ರಿ) ಸಂಸ್ಥೆಯ ಆಶ್ರಯದಲ್ಲಿ ‘ಸ್ತ್ರೀ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀ ಯ ಸಂಗೀತ ಕಾರ್ಯಕ್ರಮವು ಫೆಬ್ರವರಿ 22ರಂದು ಭಾನುವಾರ ಸಂಜೆ 5.00ರಿಂದ ನಗರದ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ. ಉತ್ಕೃಷ್ಟ ಮಟ್ಟದ‘ ಶಾಸ್ರೀಯ ಗಾಯನ ಜುಗಲ್‌ಬಂಧಿ’ ಮತ್ತು‘ ವಯೋಲಿನ್ ಟ್ರಿಯೋ’ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಸಂಗೀತ ಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಉಷಾ ಪ್ರಭಾ ಎನ್. ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೂರ್ವಾರ್ಧದಲ್ಲಿ ಯಲ್ಲಾಪುರದ ಕು.ವಿಭಾ ಹೆಗ್ಡೆ ಮತ್ತು ಬೆಂಗಳೂರಿನ ಕು.ಶಿವಾನಿ ಮಿರಾಜ್‌ಕರ್‌ ಇವರಿಂದ ಶಾಸ್ತೀಯ ಗಾಯನ ಜುಗಲ್‌ಬಂಧಿ’ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಕು.ಮೇಧಾ ಜಿ ಭಟ್ ಮತ್ತು ಭೋಪಾಲ್‌ನ ಕು.ವಿಜೇತಾ ಹೆಗ್ಡೆ ಅವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ.

ಉತ್ತಾರಾರ್ಧದಲ್ಲಿ ಮುಂಬೈನ ಡಾ.ಸಂಗೀತ ಶಂಕರ್, ರಾಗಿಣಿ ಶಂಕರ್ ಮತ್ತುನಂದಿನಿ ಶಂಕರ್‌ ಅವರಿಂದ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮ ನಡೆಯಲಿದೆ.ಇವರಿಗೆ ತಬ್ಲಾದಲ್ಲಿ ಮುಂಬೈನ ಅನುರಾಧ ಪಾಲ್‌ ಅವರು ಸಾಥ್ ನೀಡಲಿದ್ದಾರೆ.
ಸ್ತ್ರೀ’ ಕಾರ್ಯಕ್ರಮವನ್ನು ನಗರದ ಪ್ರಖ್ಯಾತ ಸಂಗೀತಾ ಗುರುಗಳಾದ ಶ್ರೀಮತಿ ಬಸ್ತಿ ಕವಿತಾ ಶೆಣೈ, ಶ್ರೀಮತಿ ವಿಭಾ ನಾಯಕ್ ಹಾಗೂ ಶ್ರೀಮತಿ ಶ್ರೀಲತಾ ಪ್ರಭುಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕೆನರಾ ಬ್ಯಾಂಕ್‌ ಮತ್ತು ಬೆಂಗಳೂರಿನ ಸೆಂಚುರಿಗ್ರೂಪ್‌ನ ಅಧ್ಯಕ್ಷರಾದ ‘ಡಾ.ಪಿ.ದಯಾನಂದ ಪೈ, ಕರ್ಣಾಟಕ ಬ್ಯಾಂಕ್ ಪ್ರೈಲಿ, ಮುದ್ರ ಪಿಂಟ್ರರ್ಸ್ಅವರು ಸಹ ಪ್ರಾಯೋಜಕತ್ವವನ್ನು ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶಾವಕಾಶವಿದ್ದು ಭಾಗವಹಿಸುವ ಎಲ್ಲಾ ನಾಲ್ಕು ಉತ್ಕೃಷ್ಟ ಕಲಾವಿದರ ವಾದನ ಸಂಯೋಜಕತೆಯ ವೈಶಿಷ್ಟ್ಯ ನೋಡಿ, ಕೇಳಿ ಆನಂದಿಸಬೇಕಾಗಿ ಆಶಿಸುತ್ತೇವೆ. ಈ ಸಂಗೀತೋತ್ಸವದಲ್ಲಿ ಪಾಲ್ಗೊಳಬೇಕಾಗಿಯೂ, ಸಂಗೀತೋತ್ಸವಕ್ಕೆ, ಮೊದಲು ಮತ್ತು ತದನಂತರ ಉತ್ತಮ ಪ್ರಚಾರ ನೀಡಬೇಕಾಗಿಯೂ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ವಿನಂತಿ.
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಫೌಂಡೇಶನ್ (ರಿ)ನ ಅಧ್ಯಕ್ಷರಾದ ಉಸ್ತಾದ್‌ ರಫೀಕ್‌ ಖಾನ್, ಕಾರ್ಯದರ್ಶಿ ಡಾ. ಉಷಾಪ್ರಭಾಎನ್. ನಾಯಕ್, ಟ್ರಸ್ಟಿಗಳಾದ ಶ್ರೀ ಮುರುಳೀಧರ್ ಜಿ ಶೆಣೈ, ಡಾ.ರಮೇಶ್ ಕೆ ಜಿ ಹಾಗೂ ಸದಸ್ಯರಾದಶ್ರೀಮತಿ ಉಜ್ವಲ್ ಪ್ರದೀಪ್, ಶ್ರೀಮತಿ ಶ್ವೇತಾ ಸುವರ್ಣ ಅವರು ಉಪಸ್ಥಿತರಿದ್ಧರು.

LEAVE A REPLY

Please enter your comment!
Please enter your name here