ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಜಾಗೃತಿ ಗ್ರಾಹಕ ಕ್ಲಬ್ ವತಿಯಿಂದ ಫೆಬ್ರವರಿ 19 ರಂದು ಗ್ರಾಹಕ ಜಾಗೃತಿ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನಾ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಗ್ರಾಹಕ ಚಳುವಳಿ, ಗ್ರಾಹಕ ಸಂರಕ್ಷಣಾ ಕಾಯ್ದೆ ಹಾಗೂ ಗ್ರಾಹಕರ ಹಕ್ಕುಗಳು ಮತ್ತು ಶೋಷಣೆಗೆ ಒಳಗಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ಉದಾಹರಣೆಗಳೊಂದಿಗೆ ಮಾಹಿತಿ ನೀಡಿದರು. ಗ್ರಾಹಕ ಕ್ಲಬ್ ನ ವತಿಯಿಂದ ನಡೆಸಿದ್ದ ಭಾಷಣ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಮಹೇಶ್ ಕುಮಾರ್ ವಿ. ಕರ್ಕೇರ ರವರು ಕಾರ್ಯಕ್ರಮ ನಿರೂಪಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಉಪ ಪ್ರಾಂಶುಪಾಲ ಲೋನಾ ಲೋಬೋ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಚಿತ್ರಕಲಾ ಸ್ಪರ್ಧೆ
8ನೇ ತರಗತಿ : ನಿತ್ಯಶ್ರೀ -ಪ್ರಥಮ, ಪ್ರತಿಕ್ಷಾ ಜಿ ಪೂಜಾರಿ -ದ್ವಿತೀಯ, ಅಶ್ವಿತಾ ಪಿ ಗೌಡ -ತೃತೀಯ , ರಿಷಿಕ -ತೃತೀಯ
9ನೇ ತರಗತಿ: ಮನಸ್ವಿ -ಪ್ರಥಮ, ನಿತಿನ್ ನಾಯ್ಕ -ದ್ವಿತೀಯ, ಶಿವರಾಜ್ -ತೃತೀಯ, ಪ್ರತೀಕ್ಷಾ -ತೃತೀಯ
ಪ್ರಬಂಧ ಸ್ಪರ್ಧೆ
ಎಂಟನೇ ತರಗತಿ :-ಅಶ್ವಿತಾ ಪಿ ಗೌಡ -ಪ್ರಥಮ, ಶಾನ್ವಿ -ದ್ವಿತೀಯ, ಸಾನ್ವಿ ಎ ಅಂಚನ್ -ತೃತೀಯ
9ನೇ ತರಗತಿ :-ವರ್ಷಿಣಿ -ಪ್ರಥಮ, ಯಕ್ಷಿತ -ದ್ವಿತೀಯ, ರಚನಾ-ತೃತೀಯ, ದಿವ್ಯ ನಾಯ್ಕ್ -ತೃತೀಯ
ಭಾಷಣ ಸ್ಪರ್ಧೆ : ವೀಕ್ಷಾ -ಪ್ರಥಮ, ತನುಶ್ರೀ -ದ್ವಿತೀಯ, ಯಕ್ಷಿತ -ತೃತೀಯ
ಗ್ರಾಹಕ ಕ್ಲಬ್ನ ಅಧ್ಯಕ್ಷೆ ಕು. ರಶ್ಮಿತಾ ಸ್ವಾಗತಿಸಿದರು. ಸದಸ್ಯೆ ಕು.ವೀಕ್ಷಾ ವಂದಿಸಿದರು.

