ಕುಕ್ಕುಂದೂರಿನಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ

0
15

ಕಾರ್ಕಳ :ಕುಕ್ಕುಂದೂರು ಗ್ರಾಮದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆ. 20ರಂದು ನಡೆದಿದೆ. ಸಚಿನ್‌ ಶೆಟ್ಟಿ (25) ಮೃತ ಯುವಕ. ಮೂಲತ: ಚಿಕ್ಕಮಗಳೂರು ಜಿಲ್ಲೆಯವರಾದ ಸಚಿನ್ ಶೆಟ್ಟಿ ಕುಕ್ಕುಂದೂರು ಗ್ರಾಮದ ನಾಗ ಎಂಟರ್ಪ್ರೈಸಸ್ ಕಟ್ಟಡದ 3ನೇ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಯಾವುದೋ ಕಾರಣದಿಂದ ಮನನೊಂದು ಮನೆಯ ಮೇಲ್ಟಾವಣಿಯ ಕಬ್ಬಿಣದ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here