ಕಡಂದಲೆ –ಇಂದು ಮೂಡುಬಿದ್ರೆ ಹೊರ ವಲದಲ್ಲಿರುವ ಕಡಂದಲೆಯ ಬ್ರಹ್ಮ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ಜರುಗಿದ ಮೂಡುಬಿದಿರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಜ್ಯೋತಿಷ್ಯ ಮತ್ತು ವಾಸ್ತು ತಜ್ಞ ಎಂ.ರಾಘವೇಂದ್ರ ಭಂಡಾರ್ಕರ್ ಮೂಡುಬಿದಿರೆ ಇವರ ಮೊದಲ ಕವನ ಸಂಕಲನ “ಓ ಮನಸ್ಸೇ… ಸಮ್ಮೇಳನಾಧ್ಯಕ್ಷರಾದ ಅಬ್ದುಲ್ ಹಮೀದ್ ಪಕ್ಕಲಡ್ಕ ಇವರಿಂದ ಬಿಡುಗಡೆಯಾಯಿತು. ಈ ಸಮಾರಂಭದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಕಮಲಾದೇವಿ ಆಸ್ರಣ್ಣ,ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ .ಎಂ ಪಿ ಶ್ರೀನಾಥ್,ಎಂ ಸಿ ಎಸ್ ಬ್ಯಾಂಕ್ ಮೂಡುಬಿದಿರೆ ಅಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್, ನ್ಯಾಯವಾದಿ ಕೆ ಆರ್ ಪಂಡಿತ್, ಚೌಟರ ಅರಮನೆಯ ಕುಲದೀಪ ಎಂ, ಎಂ ಸಿ ಎಸ್ ಬ್ಯಾಂಕಿನ ಕಾರ್ಯದರ್ಶಿ ಚಂದ್ರಶೇಖರ್ ಮೂಡುಬಿದಿರೆ ತುಳುಕೂಟದ ಅಧ್ಯಕ್ಷರಾದ ಧನಕೀರ್ತಿ ಬಲಿಪ, ಮೂಡುಬಿದಿರೆ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ,ಕಾರ್ಯಾಧ್ಯಕ್ಷರಾದ ಕೆ ಪಿ ಸುಚರಿತ ಶೆಟ್ಟಿ,ಪ್ರದಾನ ಕಾರ್ಯದರ್ಶಿ ಸದಾನಂದ ನಾರಾವಿ,ರಾಮಕೃಷ್ಣ ಶಿರೂರು, ಹೆಚ್ ಅಬ್ದುಲ್ ಗಫೂರ್,ಜಿಲ್ಲಾ ಹಿರಿಯ ಸಹಕಾರೀ ಧುರೀಣರಾದ ಎಂ ದಯಾನಂದ ಪೈ,ಯಕ್ಷಗಾನ ಸಂಘಟಕ ಎಂ ಶಾಂತಾರಾಮ್ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.

