ಮೂಡುಬಿದಿರೆಯಲ್ಲಿ ಹೈನು, ರಾಸು ನಿರ್ವಹಣಾ ತರಬೇತಿ

0
5


ವರದಿ ರಾಯಿ ರಾಜ ಕುಮಾರ
ಕರ್ನಾಟಕ ರಾಜ್ಯ ಹಾಲು ಮಹಾಮಂಡಳಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ, ಮೈಸೂರು ತರಬೇತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಂಗಣದಲ್ಲಿ ಎರಡು ದಿನಗಳ ತರಬೇತಿ ಶಿಬಿರ ಪ್ರಾರಂಭವಾಯಿತು. ಫೆಬ್ರವರಿ 21ರಂದು ದ ಕ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆಪಿ ಸುಚರಿತ ಶೆಟ್ಟಿ ದೀಪಬೆಳಗಿ ತರಬೇತಿಯನ್ನು ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ಆರೋಗ್ಯಕರ ರಾಸುಗಳನ್ನು ನಿರ್ವಹಿಸುವುದಕ್ಕೆ, ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೂ ಕೂಡ ಉತ್ತಮ ಗುಣಮಟ್ಟದ ಹಸಿರು ಹುಲ್ಲಿನೊಂದಿಗೆ, ಪೋಷಕಾಂಶ ಭರಿತ ಹಿಂಡಿ ಇತ್ಯಾದಿ ಸಂಪೂರ್ಣ ಆಹಾರವನ್ನು ವಾತಾವರಣಕ್ಕೆ ಪೂರಕವಾಗಿ ನೀಡಬೇಕಾಗುತ್ತದೆ. ಇದು ದನಗಳ ಗರ್ಭ ನಿಲ್ಲುವುದಕ್ಕೂ ಸಹಕಾರಿಯಾಗಿರುತ್ತದೆ. ದ ಕ ಜಿಲ್ಲೆಯಲ್ಲಿ 4,1 ಲಕ್ಷ ಲೀಟರ್ ಹಾಲು ಪ್ರತಿದಿನ ಉತ್ಪಾದನೆ ಆಗುತ್ತಿದ್ದು ಉತ್ತಮ ರೀತಿಯಲ್ಲಿ ಹೈನೋಧ್ಯಮ ಮುಂದುವರೆಯುತ್ತಿರುವುದಕ್ಕೆ ಸದಸ್ಯರೇ ಕಾರಣರು ಎಂದು ಅಭಿನಂದಿಸಿದರು.
ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಪಶುವೈದ್ಯಕೀಯ ಉಪ ನಿರ್ದೇಶಕ ಡಾ. ಸಂಗಮೇಶ್, ಮೈಸೂರು ತರಬೇತಿ ಕೇಂದ್ರದ ಉಪನ್ಯಾಸಕ ಮಹಾದೇವಸ್ವಾಮಿ, ನಂದಿನಿಯ ಉಪ ವ್ಯವಸ್ಥಾಪಕ ಡಾ. ಚಂದ್ರಶೇಖರ್ ಭಟ್, ಜಾನೆಟ್ ರೊಜಾರಿಯೋ, ನಡೆಸಿಕೊಡುವರು. ಮೂಡುಬಿದರೆ ತಾಲೂಕಿನ ಎಲ್ಲ ಗ್ರಾಮಗಳ ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದ ಕ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸೌಂದರ್ಯ, ಸರೋಜಿನಿ, ಕಾರ್ಯಕ್ರಮವನ್ನು ಸಂಘಟಿಸಿದ್ದರು. ಸುಚಿತ್ರ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here