ದೆಹಲಿಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ “ವಂದೇ ಮಾತರಂ” ಗೀತೆಯ ಪ್ರದರ್ಶನ ಮತ್ತು ಗೌರವಕ್ಕಾಗಿ ಸರ್ಕಾರಿ ನಿಧಿ ಬಳಕೆ !

0
8

ಧಾನಿ ನರೇಂದ್ರ ಮೋದಿಯವರು ‘ವಂದೇ ಮಾತರಂ’ಗೆ ನೀಡಿದ ಸರ್ವೋಚ್ಚ ಗೌರವವನ್ನು ವಿರೋಧಿಸಲು ಕಾಂಗ್ರೆಸ್ ಅಧಃಪತನದ ಹಾದಿ ಹಿಡಿದಿದೆ.


ದೆಹಲಿ: ಸನಾತನ ಸಂಸ್ಥೆಯು ತನ್ನ ರಜತ ಮಹೋತ್ಸವದ ಅಂಗವಾಗಿ ಡಿಸೆಂಬರ್ 13 ರಿಂದ 15 ರವರೆಗೆ ದೆಹಲಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ದೇಶದಾದ್ಯಂತ ವಿವಿಧ ಸಂಸ್ಥೆ ಮತ್ತು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ದೇಶದ ವಿವಿಧ ಭಾಗಗಳಿಂದ ಸಾವಿರಾರು ಹಿಂದುತ್ವನಿಷ್ಠರು ಆಗಮಿಸಲಿರುವ ಕಾರಣ, ಅವರ ಮುಂದೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಂತೆ ‘ವಂದೇ ಮಾತರಂ’ ಗೀತೆಯ ವೈಭವೀಕರಣವಾಗಬೇಕು ಎಂಬ ದೃಷ್ಟಿಯಿಂದ ಸನಾತನ ಸಂಸ್ಥೆಯು ಭಾರತ ಮಂಟಪದ ಪಕ್ಕದ ಹಾಲ್ ನಂ. 12 ರಲ್ಲಿ ಮೂರು ದಿನಗಳ ಕಾಲ ವಂದೇ ಮಾತರಂ ಗೀತೆಯ ಭವ್ಯ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

ಅಲ್ಲದೆ, ಮುಖ್ಯ ಕಾರ್ಯಕ್ರಮದಲ್ಲಿ ವಂದೇ ಮಾತರಂ ಸಮೂಹ ಗಾಯನವನ್ನು ಆಯೋಜಿಸಲಾಗಿತ್ತು. ಇದರೊಂದಿಗೆ ಈ ಪ್ರದರ್ಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ಶಸ್ತ್ರಾಸ್ತ್ರಗಳನ್ನೂ ಪ್ರದರ್ಶಿಸಲಾಗಿತ್ತು. ಈ ಪ್ರದರ್ಶನದ ಉದ್ಘಾಟನೆಯನ್ನು ಕೇಂದ್ರ ಸಚಿವರಿಂದ ಮಾಡಿಸಲು ನಿರ್ಧರಿಸಲಾಗಿತ್ತು ಮತ್ತು ಅದಕ್ಕಾಗಿ ನಿಯಮಿತ ಸರ್ಕಾರಿ ಪದ್ಧತಿಯಂತೆ ನಾವು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೆವು. ಅದರಂತೆ ಎಲ್ಲಾ ಆಡಳಿತಾತ್ಮಕ ಅನುಮತಿಗಳನ್ನು ಪಡೆದು ಸರ್ಕಾರವು ಅದಕ್ಕೆ ಮನ್ನಣೆ ನೀಡಿತು. ಉಳಿದ ಕಾರ್ಯಕ್ರಮವು ಸನಾತನ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮವಾಗಿತ್ತು ಮತ್ತು ಅದರ ಹೆಸರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಎಂದಾಗಿತ್ತು. ಆದರೆ, ಕಾಂಗ್ರೆಸ್ ಇದನ್ನು ‘ಹಿಂದೂ ರಾಷ್ಟ್ರದ ಮಹೋತ್ಸವ’ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು ಉತ್ತರಿಸಿದ್ದಾರೆ.

ಶ್ರೀ. ವರ್ತಕ್ ಅವರು ಮುಂದೆ ಮಾತನಾಡುತ್ತಾ, “ಈ ಕಾರ್ಯಕ್ರಮದಲ್ಲಿ ಯಾವುದೇ ಭಾರತೀಯ ಸಂವಿಧಾನ ವಿರೋಧಿ ಭಾಷಣ ನಡೆದಿಲ್ಲ. ಎಲ್ಲಾ ಭಾಷಣಕಾರರು ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಿದರು ಮತ್ತು ಅದಕ್ಕೆ ಪರಿಹಾರಗಳನ್ನು ಸೂಚಿಸಿದರು. ವಾಸ್ತವವಾಗಿ, ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿಗಳು ಸಾಂವಿಧಾನಿಕ ಹುದ್ದೆಯಲ್ಲಿದ್ದೂ ‘ಕಾಂಗ್ರೆಸ್ ಅಂದರೆ ಮುಸ್ಲಿಂ ಮತ್ತು ಮುಸ್ಲಿಂ ಅಂದರೆ ಕಾಂಗ್ರೆಸ್’ ಎಂಬ ಸಂವಿಧಾನ ವಿರೋಧಿ ಘೋಷಣೆ ಮಾಡುತ್ತಾರೆ. ಕಾಂಗ್ರೆಸ್‌ನ ಅಂದಿನ ಪ್ರಧಾನ ಮಂತ್ರಿಗಳು ‘ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರದ್ದು’ಎಂದು ಹೇಳಿಕೆ ನೀಡುತ್ತಾರೆ. ಸುಪ್ರೀಂ ಕೋರ್ಟ್ ಹಲವು ಬಾರಿ ನಿರಾಕರಿಸಿದ್ದರೂ ಧರ್ಮದ ಆಧಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಘೋಷಿಸುತ್ತಾರೆ. ಕೇರಳದಲ್ಲಿ ಕಾಂಗ್ರೆಸ್ ನಾಯಕರು ಬೀಫ್ ಬ್ಯಾನ್ (ಗೋಮಾಂಸ ನಿಷೇಧ) ವಿರೋಧಿಸಲು ರಸ್ತೆಯಲ್ಲಿ ಗೋಹತ್ಯೆ ಮಾಡುತ್ತಾರೆ; ಇವೆಲ್ಲವೂ ಸಂವಿಧಾನ ವಿರೋಧಿಯಲ್ಲವೇ ? ಆದ್ದರಿಂದ ಕಾಂಗ್ರೆಸ್ ಮೊದಲು ತನ್ನ ಪಾಪಗಳನ್ನು ನೋಡಿಕೊಳ್ಳಲಿ” ಎಂದು ಕಿಡಿಕಾರಿದರು.

“ಕಾಂಗ್ರೆಸ್ ಮಾಡಿದ ಸಿಖ್ ನರಮೇಧವನ್ನು ಜನರು ಇಂದಿಗೂ ಮರೆತಿಲ್ಲ. ಹಾಗೆಯೇ ಬಾಟ್ಲಾ ಹೌಸ್ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸುವುದು, ಮುಂಬೈನ ೨೬/೧೧ ಭಯೋತ್ಪಾದಕ ದಾಳಿಯಲ್ಲಿ ಕಸಬ್ ಸೇರಿದಂತೆ ಪಾಕಿಸ್ತಾನಿ ಭಯೋತ್ಪಾದಕರು ಭಾಗಿಯಾಗಿರುವ ಪುರಾವೆಗಳಿದ್ದರೂ, ಕಾಂಗ್ರೆಸ್ ನಾಯಕರು ‘೨೬/೧೧ ದಾಳಿಯು ಆರ್.ಎಸ್.ಎಸ್. ಸಂಚು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ದೂಷಿಸುವ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುತ್ತಾರೆ.”

“ಕಾಂಗ್ರೆಸ್‌ನ ಅಂದಿನ ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಅವರು ಈಗ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಏನೆಂದರೆ, ‘ನಾನು ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಬಳಸಬಾರದಿತ್ತು, ಆದರೆ ಪಕ್ಷವು ಹೇಳಿದ್ದರಿಂದ ಬಳಸಿದೆ’.ಈ ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸುವ ಸಿದ್ಧಾಂತವನ್ನು ಅವರಿಗೆ ಯಾರು ಹೇಳಿಕೊಟ್ಟಿದ್ದರು ಎಂಬುದನ್ನು ಕಾಂಗ್ರೆಸ್ ಪಕ್ಷ ಏಕೆ ಬಹಿರಂಗಪಡಿಸಬಾರದು? ಇದೇ ಸಿದ್ಧಾಂತದ ಆಧಾರದ ಮೇಲೆ ಸನಾತನ ಸಂಸ್ಥೆಯನ್ನೂ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿತ್ತು. ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ; ಆದರೆ ಯಾವುದೇ ಪ್ರಕರಣದಲ್ಲಿ ನ್ಯಾಯಾಲಯವು ಸನಾತನ ಸಂಸ್ಥೆಯನ್ನು ದೋಷಿ ಎಂದು ಘೋಷಿಸದಿದ್ದರೂ, ನಮ್ಮನ್ನು ಭಯೋತ್ಪಾದಕರು ಎಂದು ಕರೆಯುವ ಕಾಂಗ್ರೆಸ್ ನಾಯಕರು ಮತ್ತು ಸಂಬಂಧಿತ ಪೋರ್ಟಲ್‌ಗಳ ವಿರುದ್ಧ ನಾವು ಮಾನಹಾನಿ ಮೊಕದ್ದಮೆ ಹೂಡಲಿದ್ದೇವೆ” ಎಂದು ಶ್ರೀ. ವರ್ತಕ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here