ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ

0
10

ಗಿರಿಜಾ ಕಲ್ಯಾಣ – ಇಂದ್ರಜಿತು ಕಾಳಗ

ಮಂಗಳೂರು : ಶಾರದಾ ಮಾಸದ ಕೂಟ ಸುರತ್ಕಲ್ ಇದರ ಆಶ್ರಯದಲ್ಲಿ ಫೆಬ್ರವರಿ 14ರಂದು ಹೊಸಬೆಟ್ಟು ಶಾರದಾ ಮಂದಿರದಲ್ಲಿ ಇಡೀ ರಾತ್ರಿಯ ಯಕ್ಷಗಾನ ತಾಳಮದ್ದಳೆ ಜರಗಿತು. ಮಹಾ ಶಿವರಾತ್ರಿ ಅಂಗವಾಗಿ ಜರಗಿದ ‘ಗಿರಿಜಾ ಕಲ್ಯಾಣ – ಇಂದ್ರಜಿತು ಕಾಳಗ’ ಅಹೋರಾತ್ರಿ ತಾಳಮದ್ದಳೆಯನ್ನು ಸಾಂಪ್ರದಾಯಿಕ ಗಣಪತಿ ಸ್ತುತಿಯ ಮೂಲಕ ಯಕ್ಷಗಾನ ಶೈಲಿಯಲ್ಲಿ ಉದ್ಘಾಟಿಸಲಾಯಿತು.

ವಿಶೇಷ ಅತಿಥಿಗಳಾಗಿ ವಿಶ್ವೇಶ್ವರ ಬಧವಿದೆ, ರಮಾ ವೆಂಕಟರಾವ್, ವೈ. ರಾಘವೇಂದ್ರ ರಾವ್, ಡಾ. ಸತೀಶ್ ಪುಣಿಂಚಿತ್ತಾಯ ಮತ್ತು ಮಧುಕರ ಭಾಗವತರು ಹಿಮ್ಮೇಳದಲ್ಲಿ ಭಾಗವಹಿಸಿದರು. ಸಂಘಟಕರಾದ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು ಅಹೋರಾತ್ರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಗಿರಿಜಾ ಕಲ್ಯಾಣ :

ಮೊದಲ ಪ್ರಸಂಗ ‘ಗಿರಿಜಾ ಕಲ್ಯಾಣ’ದಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ, ರಾಜಾರಾಮ ಹೊಳ್ಳ ಕೈರಂಗಳ, ಡಾ.ಪ್ರಖ್ಯಾತ್ ಶೆಟ್ಟಿ ಅಳಿಕೆ; ಚೆಂಡೆ – ಮದ್ದಲೆಯಲ್ಲಿ ಸಂಪತ್ ಬಾಬು, ಹರಿಶ್ಚಂದ್ರ ನಾಯಗ ಮಾಡೂರು, ಲಕ್ಷ್ಮೀಶ ಉಪಾಧ್ಯಾಯ, ಹರೀಶ್ ಹೆಬ್ಬಾರ್, ಚಂದ್ರಶೇಖರ ಕಾರಂತ್ ಭಾಗವಹಿಸಿದ್ದರು.

ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ದೇವೇಂದ್ರ), ಪಶುಪತಿ ಶಾಸ್ತ್ರಿ ಶಿರಂಕಲ್ಲು (ಈಶ್ವರ ), ವೇಣುಗೋಪಾಲ್ ಭಟ್ ಶೇಣಿ (ಗಿರಿಜೆ), ವಿನಯಾಚಾರ್ ಹೊಸಬೆಟ್ಟು ಮತ್ತು ಸದಾಶಿವ ಆಳ್ವ ತಲಪಾಡಿ (ಮನ್ಮಥ), ಕಲಾವತಿ (ಪರ್ವತ ರಾಜ), ವಿನೋದ್ ಕುಮಾರ್ ಪೆರ್ಲ ಮತ್ತು ನಳಿನಿ ಮೋಹನ್ (ತಾರಕಾಸುರ), ಗಾಯತ್ರಿ ಬಿ. ಎಸ್. (ರತಿ), ರಾಧಾಕೃಷ್ಣ ಭಟ್ ಕುಳಾಯಿ (ನಾರದ) , ಸಾವಿತ್ರಿ ಶಾಸ್ತ್ರಿ (ವಿಷ್ಣು) , ಶ್ರೀಧರ್ ಎಸ್.ಪಿ. (ಷಣ್ಮುಖ) ಅರ್ಥಧಾರಿಗಳಾಗಿದ್ದರು.

ಇಂದ್ರಜಿತು ಕಾಳಗ :

ಬಳಿಕ ಜರಗಿದ ‘ಇಂದ್ರಜಿತು ಕಾಳಗ’ದಲ್ಲಿ ರಾಧಾಕೃಷ್ಣ ಕಲ್ಚಾರ್ (ಇಂದ್ರಜಿತು) , ಗಣೇಶ್ ಶೆಟ್ಟಿ ಕನ್ನಡಿಕಟ್ಟೆ (ಹನುಮಂತ), ದಿನೇಶ್ ಶರ್ಮ (ರಾಮ), ಕೆ.ಕಲಾವತಿ (ಮಾಯಾಸೀತೆ), ವಿನಯ ಆಚಾರ್ಯ ಹೊಸಬೆಟ್ಟು (ವಿಭೀಷಣ), ಗೋಪಾಲಕೃಷ್ಣ ಅನಂತಾಡಿ (ಲಕ್ಷ್ಮಣ) ಅರ್ಥಧಾರಿಗಳಾಗಿದ್ದರು.

ಭಾಗವತರಾಗಿ ಗಣೇಶ್ ಕುಮಾರ್ ಹೆಬ್ರಿ, ಶಶಿಧರ್ ರಾವ್ ಚಿತ್ರಾಪು, ಮಾಧವ ಮಯ್ಯ ಸುರತ್ಕಲ್ ಹಾಗೂ ಚೆಂಡೆ – ಮದ್ದಳೆ ವಾದಕರಾಗಿ ರಾಘವೇಂದ್ರ ಹೆಜಮಾಡಿ, ರಾಕೇಶ್ ಹೊಸಬೆಟ್ಟು , ರಾಮ ಹೊಳ್ಳ ಸುರತ್ಕಲ್, ವೇದವ್ಯಾಸ ರಾವ್ ಹಿಮ್ಮೇಳದಲ್ಲಿದ್ದರು.

ಫೆ.14ರಂದು ಶನಿವಾರ ರಾತ್ರಿಯಿಡೀ ನಡೆದ ಯಕ್ಷಗಾನ ತಾಳಮದ್ದಳೆ ಕೂಟ ಮಾರನೇ ದಿನ ಭಾನುವಾರ ಮುಂಜಾನೆ ಮಂಗಳಾಚರಣೆಯೊಂದಿಗೆ ಕೊನೆಗೊಂಡಿತು.

LEAVE A REPLY

Please enter your comment!
Please enter your name here