ಬಂಟ್ವಾಳ : ಮಳೆಗಾಲದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಹೆಲ್ಪ್ ಲೈನ್ ಸೇವಾ ತಂಡ, ಮಂಗಳೂರು ವತಿಯಿಂದ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಪಕ್ಕಲಪಾದೆ, ಮೇರಮಜಲು ಅಂಚೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತವಾಗಿ ಕೊಡೆಗಳನ್ನು ವಿತರಿಸಲಾಯಿತು.
ದಾನಿಗಳದ ಸುಶಾಂತ್ ಅಧ್ಯಕ್ಷರು ಮಜಾಲ್ ಫ್ರೆಂಡ್ಸ್ ನಾಗುರಿ ಅವರನ್ನು ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಲ್ಪ್ ಲೈನ್ ಸೇವಾ ತಂಡದ ಸ್ಥಾಪಕ ಮಹೇಶ್ ಅಮೀನ್, ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಜನಸೇವೆಯೇ ನಮ್ಮ ತಂಡದ ಪ್ರಮುಖ ಧ್ಯೇಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಜಾಲ್ ಫ್ರೆಂಡ್ಸ್, ನಾಗುರಿಯ ಅಧ್ಯಕ್ಷ ಸುಶಾಂತ್, ನಿವೃತ್ತ ಬ್ಯಾಂಕ್ ಆಫ್ ಬರೋಡ ಅಧಿಕಾರಿ ಕೃಷ್ಣ ಕುಳಾಯಿ, ಜಯಂತ್ ಕೊಳಂಬೆ, ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯಾ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರೇಶ್ಮಾ ಸಿಂತಿಯಾ ಸಿಕ್ವೇರಾ, ಶಿಕ್ಷಕಿಯರಾದ ಪ್ರಮೀಳಾ ಅಶೋಕ್, ಸರಸ್ವತಿ ಉಮೇಶ್, ಪವಿತ್ರ, ಸ್ವಾತಿ, ವಾಣಿ ಹಾಗೂ ಜಯರಾಜ್ ಬಡ್ದುರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರನ್ನು ಮಕ್ಕಳಿಂದ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ದಾನಿಗಳು ಹಾಗೂ ಮುಖ್ಯ ಶಿಕ್ಷಕರನ್ನು ವಿದ್ಯಾರ್ಥಿಗಳ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹೇಶ್ ಅಮೀನ್ ವಹಿಸಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ರೇಶ್ಮಾ ಸಿಂತಿಯಾ ಸಿಕ್ವೇರಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ರೇಣುಕಾ ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

