ಮಂಗಳೂರು, ಫೆ. 17: ಮಿಲಾಗ್ರಿಸ್ ಕಾಲೇಜಿನ ಆಹಾರ, ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ವಿಭಾಗದ ವತಿಯಿಂದ “ನ್ಯೂಟ್ರಿಸಿರ‍್ಜಿ” ಎಂಬ ಒಂದು ದಿನದ ರಾಷ್ಟ್ರಮಟ್ಟದ ಕರ‍್ಯಾಗಾರವು ಜರುಗಿತು.
ಪೌಷ್ಟಿಕಾಂಶ ಮತ್ತು ಆರೋಗ್ಯದ ನಡುವಿನ ಸಮನ್ವಯತೆಯನ್ನು ಬಿಂಬಿಸುವ ಉದ್ದೇಶದಿಂದ, ಗಣ್ಯರು ತಾಜಾ ಧಾನ್ಯಗಳು ಮತ್ತು ತರಕಾರಿಗಳನ್ನು ಮಿಶ್ರಣ ಮಾಡಿ ಆರೋಗ್ಯಕರ ಸಲಾಡ್ ಸಿದ್ಧಪಡಿಸುವ ಮೂಲಕ ಕರ‍್ಯಕ್ರಮವನ್ನು ಉದ್ಘಾಟಿಸಲಾಯಿತು.
ಕರ‍್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ. ಆಲ್ವಿನ್ ಸೆರಾವೊ ಮಾತನಾಡಿ, ಅಗತ್ಯ ಪೋಷಕಾಂಶಗಳು ನಮ್ಮ ದೈನಂದಿನ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಹಾಗೂ ಆಹಾರ ಮತ್ತು ಪೌಷ್ಟಿಕತೆ ಕುರಿತು ಜನರಿಗೆ ಶಿಕ್ಷಣ ನೀಡುವುದು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಮುಖ್ಯ ಕೀಲಿಕೈ ಎಂದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಬೋನವೆಂಚರ್ ನಜರೆತ್ ಮಾತನಾಡಿ, ಆಧುನಿಕ ಜೀವನಶೈಲಿಯೊಂದಿಗೆ ಆರೋಗ್ಯದ ಮಹತ್ವವನ್ನು ಅರಿಯುವುದು ಅತ್ಯಂತ ಅವಶ್ಯಕ ಎಂದರು.
ಕರ‍್ಯಕ್ರಮದ ಮೊದಲ ಗೋಷ್ಠಿಯಲ್ಲಿ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಅವರು, ಕರುಳಿನ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಯು ಮನುಷ್ಯನ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ಪ್ರಭಾವದ ಕುರಿತು ಮಾಹಿತಿ ನೀಡಿದರು.
ಎರಡನೇ ಗೋಷ್ಠಿಯಲ್ಲಿ ನವದರ‍್ಗಾ ಫುಡ್ ಪ್ರಾಡಕ್ಟ್ಸ್‌ನ ಗುಣಮಟ್ಟ ನಿಯಂತ್ರಣ ವ್ಯವಸ್ಥಾಪಕರಾದ ಮಿಸ್ ಶಿಖಾ ಎ. ಎಸ್. ಅವರು ಆಹಾರ ಸುರಕ್ಷತೆ ಮತ್ತು ಕೈಗಾರಿಕಾ ಗುಣಮಟ್ಟ ವಿಭಾಗದಲ್ಲಿ ವಿದ್ಯರ‍್ಥಿಗಳಿಗಿರುವ ವೃತ್ತಿ ಅವಕಾಶಗಳು ಮತ್ತು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ವಿವರಿಸಿದರು.

ಮೂರನೇ ಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಹಿರಿಯ ಆಹಾರ ತಜ್ಞರಾದ ಅರುಣಾ ಮಲ್ಯ ಅವರು ಆಸ್ಪತ್ರೆಗಳಲ್ಲಿ ಆಹಾರ ಪದ್ಧತಿಯ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಕರ‍್ಯಾಗಾರದಲ್ಲಿ ಭಾಗವಹಿಸಿದ ವಿವಿಧ ಕಾಲೇಜುಗಳ ಒಟ್ಟು 170 ವಿದ್ಯರ‍್ಥಿಗಳು ಹಾಗೂ 5 ಅಧ್ಯಾಪಕರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕರ‍್ಯಕ್ರಮದಲ್ಲಿ ಕ್ಲೇವನ್ ಕರ‍್ಡೆರೊ ಮತ್ತು ಅನುಷಾ ಆಂಜನೇಯ ಕರ‍್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಬಿ. ಪ್ರತಿಭಾ ಡಿಸೋಜ ಸ್ವಾಗತಿಸಿದರು, ಕರ‍್ಯಕ್ರಮದ ಸಂಯೋಜಕರಾದ ಮಿಸ್ ಎಸ್. ಶೈಲಾ ಮೊರಸ್ ವಂದನರ‍್ಪಣೆ ಮಾಡಿದರು. ಉಪನ್ಯಾಸಕಿ ದಿವ್ಯಶ್ರೀ ಉಪಸ್ಥಿತರಿದ್ದರು.

