ಎಐ ಚಾಲಿತ ಉದ್ಯಮ ಅವಕಾಶ ವೇದಿಕೆ ಬಿಡುಗಡೆ

0
12

ಮಂಗಳೂರು: ಪ್ರಾಜೆಕ್ಟ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಾಜೆಕ್ಟ್ಸ್ ಟುಡೇ ಸಂಸ್ಥೆಯು ಎಐ- ಚಾಲಿತ ವ್ಯವಹಾರ ಅವಕಾಶ ವೇದಿಕೆಯನ್ನು (ಬಿಸಿನೆಸ್ ಅಪಾರ್ಚುನಿಟಿ ಪ್ಲಾಟ್ ಫಾರ್ಮ್) ಪರಿಚಯಿಸಿದೆ.
ಈ ಹೊಸ ವೇದಿಕೆಯು ಯೋಜನೆಯ ಸಂಪೂರ್ಣ ಸಂದರ್ಭ, ಟೆಂಡರ್ ಗಳು ಮತ್ತು ಎಲ್1/ ಆರ್ಡರ್ ಅಪ್ ಡೇಟ್ ಗಳು ಹಾಗೂ ಸ್ಟೇಕ್ ಹೋಲ್ಡರ್ ಇಂಟೆಲಿಜೆನ್ಸ್‍ಗಳನ್ನು ಒಂದು ಅನುಕೂಲಕರ ವ್ಯವಸ್ಥೆಯೊಳಗೆ ತರುತ್ತದೆ ಮತ್ತು ಇದು ಸಂಸ್ಥೆಗಳು ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ಹೇಳಿದೆ.

ಅಪ್ ಗ್ರೇಡ್ ಮಾಡಲಾದ ಈ ವೇದಿಕೆಯು ಪ್ರಾಯೋಗಿಕ ಫಲಿತಾಂಶಗಳ ಮೇಲೆ ಗಮನ ಕೇಂದ್ರೀಕರಿಸಿದ ಎಐ-ಆಧರಿತ ವ್ಯವಸ್ಥೆಯನ್ನು ಒದಗಿಸಲಿದೆ. ಇದರಲ್ಲಿ ಬಿಓಕ್ಯೂ ಹುಡುಕಾಟ, ಉಪ-ಯೋಜನೆಗಳ ಟ್ರ್ಯಾಕಿಂಗ್, ಟೆಂಡರ್ ನಿಂದ ಆರ್ಡರ್ ವರೆಗಿನ ಪ್ರಯಾಣದ ಗೋಚರತೆ, ಬಿಡ್ ದಾರರು ಮತ್ತು ಭಾಗವಹಿಸುವಿಕೆಯ ಒಳನೋಟಗಳು, ಅವಕಾಶ ಅಂದಾಜು ಸಾಧನಗಳು, ವಿಶ್ವಾಸಾರ್ಹತೆ ಮತ್ತು ವಿಶ್ಲೇಷಣಾ ಡ್ಯಾಶ್ ಬೋರ್ಡ್‍ಗಳು ಮತ್ತು ಶ್ರೀಮಂತ ಸ್ಟೇಕ್ ಹೋಲ್ಡರ್ ರಿಲೇಷನ್ ಶಿಪ್ ಮ್ಯಾಪಿಂಗ್ ಸೇರಿವೆ ಎಂದು ವಿವರಿಸಲಾಗಿದೆ.

ಈ ಸಾಮಥ್ರ್ಯಗಳು ಬಳಕೆದಾರರ ಅಗತ್ಯತೆಗಳ ಆಧಾರದ ಮೇಲೆ ಸಂಬಂಧಿತ ಯೋಜನೆಗಳು ವೇಗವಾಗಿ ಮುಕ್ತಾಯಗೊಳ್ಳಲು ಅನುವು ಮಾಡಿಕೊಡುತ್ತವೆ. ಸಂಸ್ಥೆಗಳು “ಏನು ನಡೆಯುತ್ತಿದೆ” ಎಂಬುದರಿಂದ ಹಿಡಿದು “ನಾವು ಮುಂದೆ ಏನು ಮಾಡಬೇಕು” ಎಂಬ ಹಂತಕ್ಕೆ ಹೋಗಲು ಸಹಾಯ ಮಾಡುತ್ತದೆ. ಜೊತೆಗೆ ಹಂತ, ವ್ಯಾಪ್ತಿ ಮತ್ತು ಸ್ಟೇಕ್ ಹೋಲ್ಡರ್‍ಗಳ ಬಗ್ಗೆ ಸ್ಪಷ್ಟತೆಯನ್ನು ಒದಗಿಸುತ್ತದೆ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here