ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಆಕರ್ಷಕ ಗೃಹಿಣಿ” ಸ್ಪರ್ಧೆಗೆ ಆಹ್ವಾನ

0
36

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ವಿವಾಹ ಆದ ಗೃಹಿಣಿಯರು ಮದುಮಗಳ ತರಹದ ವೇಷಭೂಷಣದೊಂದಿಗೆ ಆಗಮಿಸಿ ಬೇಕಾಗಿದೆ “ಆಕರ್ಷಕ ಗೃಹಿಣಿ” ಸ್ಪರ್ಧೆ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.

ನಾಲ್ಕು ಗೋಡೆ ಮದ್ಯ ಇರುವ ಅಡಿಗೆ ಮನೆಗೆ ಸೀಮಿತವಾದ ಮಹಿಳೆಯರಿಗೆ ಅವರ ಪ್ರತಿಭೆಗಳನ್ನು ಮುಕ್ತವಾದ ವೇದಿಕೆ ಕಲ್ಪಿಸಿ ಅನಾವರಣಗೊಳಿಸುವ ಸದುದ್ದೇಶದಿಂದ ಯಾವುದೇ ವಯೋಮಾನದ ಮಿತಿ ಇಲ್ಲದೇ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು 05-03-2026 ರೊಳಗೆ ಈ ಕೆಳಗಿನ ಸಹನೀವಾಣಿ ಸಂಖ್ಯೆಗೆ ಹೆಸರು ನೊಂದಾಯಿಸಬೇಕಾಗಿದೆ ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ವಿನಂತಿಸಿದ್ದಾರೆ.

ಹೆಸರು ನೊಂದಾಯಿಸುವ ಸನೀಹವಾಣಿ ಸಂಖ್ಯೆ 9743897578

LEAVE A REPLY

Please enter your comment!
Please enter your name here