ಗುರುಮಠ ಕಾಳಿಕಾಂಬಾ ದೇವಾಲಯದ ವರ್ಷಾವಧಿ ಮಹೋತ್ಸವ

0
11

ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ಗುರು ಮಠ ಕಾಳಿಕಾಂಬ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಫೆಬ್ರವರಿ 24 ರಿಂದ 28ರ ವರೆಗೆ ನಡೆಯುತ್ತಿದೆ. ಫೆಬ್ರವರಿ 25ರಂದು ನಡೆದ ಧಾರ್ಮಿಕ ಸಭೆಯ ಪಾವನ ಸಾನಿಧ್ಯ ಮತ್ತು ಆಶೀರ್ವಚನದಲ್ಲಿ ಪರಮಪೂಜ್ಯ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಜಿ ಅವರು ದೇವಾಲಯದ ಅಭಿವೃದ್ಧಿಯಲ್ಲಿ ಸಮಾಜ ಬಾಂಧವನು ಸಹಕರಿಸುತ್ತಿರುವ ಕುರಿತು ಹರ್ಷ ವ್ಯಕ್ತಪಡಿಸುತ್ತಾ ಅಭಿನಂದಿಸಿದರು.

ಯುವಕರು ಇನ್ನಷ್ಟು ಹೆಚ್ಚಿನ ತಾಂತ್ರಿಕ ನೈಪುಣ್ಯತೆಯನ್ನು ಮೈಗೂಡಿಸಿಕೊಂಡು ಹೊಸ ಹೊಸ ವಿಷಯಗಳ ಬಗ್ಗೆ ಮುಂದುವರಿಯಬೇಕು ಎಂದು ಆಶಿಸಿದರು. ಒಳ್ಳೆಯ ಕೆಲಸದಲ್ಲಿ ಕೈಜೋಡಿಸಿದರೆ ಕಾಳಿಕಾ ಮಾತೆಯು ಕೃಪೆ ದೋರುತ್ತಾಳೆ ಎಂದು ಆಶೀರ್ವಾದ ಗೈದರು.

ಡ್ರೋನ್ ತಯಾರಿಕೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ 11 ವರ್ಷದ ಕಿರಿಯ ಬಾಲಕ ಮಾಸ್ಟರ್ ಈಶಾನ ವಿಕ್ರಮ ಪಾಲ್ತಾಡಿ ಇವರನ್ನು ಸನ್ಮಾನಿಸಲಾಯಿತು. ಗ್ರಾಮ ಕೂಡುವಳಿಕೆ ಮುಕ್ತಸರ ಪುರೋಹಿತ ಜಗನ್ನಾಥ ಆಚಾರ್ಯ ಪಡುಮಾರ್ನಾಡು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ರತ್ನಾವತಿ ಆಚಾರ್, ಪೆನ್ಸಿಲ್ ಆರ್ಟ್ ಖ್ಯಾತಿಯ ವಿಶೇಷ ಚೇತನ ಅಖಿಲೇಶ ಆಚಾರ್ಯ ರವರನ್ನು ಗೌರವಿಸಲಾಯಿತು. ಮೆಟ್ರಿಕ್ ಹಾಗೂ ಪಿ ಯು ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಗುರುಮಠ ಕಾಳಿಕಾಂಬ ದೇವಾಲಯದ ಆಡಳಿತ ಮುಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ವೇಣುಗಿರಿ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಾಲಯದ ಆಡಳಿತ ಮುಕ್ತೈಸರ ಮುರಹರಿ ಆಚಾರ್ಯ, ಮುಕ್ತೇಸರ ಯೋಗೀಶ ಆಚಾರ್ಯ, ಶ್ರೀನಾಥ್ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಹಾಜರಿದ್ದರು. ಎರಡನೇ ಮುಕ್ತೇಸರ ಶಿವರಾಮ ಆಚಾರ್ಯ ಉಳಿಯ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳಾಡಿದರು. ಜಗದೀಶ ಆಚಾರ್ಯ ಮತ್ತು ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here