ಎಲ್‍ಐಸಿ ಮ್ಯೂಚುವಲ್ – ಫಂಡ್ ಕಚೇರಿ ಉದ್ಘಾಟನೆ

0
6

ಮಂಗಳೂರು : ಎಲ್‍ಐಸಿ ಮ್ಯೂಚುವಲ್ ಫಂಡ್ ಇಂದು ಮಂಗಳೂರು ನಗರದಲ್ಲಿ ಸುಸಜ್ಜಿತ, ಅತ್ಯಾಧುನಿಕ ಹಾಗೂ ವಿಶಾಲ ಕಚೇರಿಯನ್ನು ಆರಂಭಿಸಿದೆ. ಹೂಡಿಕೆದಾರರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮತ್ತು ದಕ್ಷಿಣ ಭಾರತದ ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳಲ್ಲಿ ತನ್ನ ವ್ಯಾಪ್ತಿ ಬಲಪಡಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇಟ್ಟಿದೆ ಎಂದು ಕಂಪನಿ ಪ್ರಕಟಿಸಿದೆ.

ನವಭಾರತ ಸರ್ಕಲ್ ಬಳಿಯ ರಾಮಭವನ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿರುವ ಕಚೇರಿ, ಸಮಗ್ರ ಸೇವೆ, ವಿತರಕರಿಗೆ ಮೀಸಲಾದ ನೆರವು ಮತ್ತು ಎಲ್‍ಐಸಿ ಎಂಎಫ್‍ನ ಎಲ್ಲ ಈಕ್ವಿಟಿ, ಡೆಟ್, ಹೈಬ್ರೀಡ್ ಹಾಗೂ ಪರಿಹಾರ ಆಧರಿತ ಯೋಜನೆಗಳನ್ನು ಅನುಕೂಲಕರ ರೀತಿಯಲ್ಲಿ ಒದಗಿಸುತ್ತದೆ.

ಮಂಗಳೂರಿನಲ್ಲಿ 535ಕ್ಕೂ ಹೆಚ್ಚು ಸಕ್ರಿಯ ಮ್ಯೂಚುವಲ್ ಫಂಡ್ ವಿತರಕರಿದ್ದು, ಹೂಡಿಕೆದಾರರಿಗೆ ಮತ್ತು ಪಾಲುದಾರರಿಗೆ ಉತ್ತಮ ನೆರವು, ವೇಗದ ಸೇವೆ ಮತ್ತು ಉತ್ತಮ ಅನುಭವ ಒದಗಿಸುವ ದೃಷ್ಟಿಯಿಂದ ಸುಧಾರಿತ ಶಾಖೆ ತೆರೆಯಲಾಗಿದೆ ಎಂದು ಉದ್ಘಾಟನೆ ನೆರವೇರಿಸಿದವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ರವಿಕುಮಾರ್ ಝಾ  ಹೇಳಿದ್ದಾರೆ.

ಎಲ್‍ಐಸಿ ಮ್ಯೂಚುವಲ್ ಫಂಡ್ ಮಂಗಳೂರಿನಲ್ಲಿ 2026ರ ಜನವರಿ ಅಂತ್ಯದ ವೇಳೆಗೆ 281.29 ಕೋಟಿ ರೂಪಾಯಿ ಆಸ್ತಿ ನಿರ್ವಹಿಸುತ್ತಿದೆ. ಈಕ್ವಿಟಿ ವಿಭಾಗದಲ್ಲಿ 247.80 ಕೋಟಿ ಹಾಗೂ ನಗದು ರೂಪದಲ್ಲಿ 6.10 ಕೋಟಿ, ಧೀರ್ಘಾವಧಿ ಸಾಲ ನಿಧಿಯಲ್ಲಿ 8.46 ಕೋಟಿ, ಅಲ್ಪಾವಧಿ ಸಾಲ ನಿಧಿಯಲ್ಲಿ 15.65 ಕೋಟಿ ಹಾಗೂ ಇಟಿಎಫ್ ವಿಭಾಗದಲ್ಲಿ 3.28 ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here