ಕಾಸರಗೋಡು : ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಸರ್ವಧ್ಯಕ್ಷರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ಅವರೀಗೆ ಸಮ್ಮೇಳನ ಪ್ರಯೋಜಕರಾದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಮುತುವರ್ಜಿಯಲ್ಲಿ ವಿಶೇಷ ಸನ್ಮಾನ, ಗೌರವಾರ್ಪಣೆ ನಡೆಯಿತು. ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ, ಗದಗ ಗೋವಿನಾಳದ ಶ್ರೀ ಶ್ರೀ ರಮೇಶ ಮಹಾ ಸ್ವಾಮಿಗಳು ಸ್ಮರಣಿಕೆ ನೀಡಿ, ಡಾ. ವಾಮನ್ ರಾವ್ ಬೇಕಲ್ ಹಾರಾರ್ಪಣೆ ಗೈದರು.
ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರು ಗೌರವ ಪತ್ರ ನೀಡಿ ಶುಭ ಹಾರೈಸಿದರು. ಪ್ರದೀಪ್ ಕುಮಾರ್ ಕಲ್ಕೂರ ಸನ್ಮಾನ ಪತ್ರ ಓದಿದರು. ವೇದಿಕೆಯಲ್ಲಿ ಡಾ. ಸುರೇಶ್ ನೆಗಳಗುಳಿ, ಕ. ರ. ವೇ. ಕರ್ನಾಟಕ ರಾಜ್ಯ ಸಂಚಾಲಕ ನಂ. ವಿಜಯ ಕುಮಾರ್, ಜಯಾನಂದ ಪೆರಾಜೆ ಕ. ಸಾ. ಪ ವಿಶಾಲಾಕ್ಷ ಪುತ್ರಕಳ, ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷ ಸಂ. ನ. ತಮ್ಮನಗೌಡ್ರ, ಕನ್ನಡ ಭವನ ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಎಮ್. ಐ. ಟಿ. ಮಣಿಪಾಲ, ರಾಜೇಶ್ ಕೋಟೆಕಣಿ, ಸಂದ್ಯಾ ರಾಣಿ ಟೀಚರ್ ಮುಂತಾದವರಿದ್ದರು.

