ಶ್ರೀಕೃಷ್ಣ ಶಿಶು ಮಂದಿರ ಕಂದೂರು ಸಜೀಪಮೂಡ ಇದರ ವಾರ್ಷಿಕೋತ್ಸವ ಯಶಸ್ವಿ

0
71

ಶ್ರೀಕೃಷ್ಣ ಶಿಶು ಮಂದಿರ ಕಂದೂರು ಸಜೀಪಮೂಡ ಇದರ ವಾರ್ಷಿಕೋತ್ಸವವು ಶುಕ್ರವಾರದಂದು ಆಡಳಿತ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಸಾರ್ಥ ವು ಅಧ್ಯಕ್ಷತೆಯಲ್ಲಿ ಜರಗಿತು.

ನಿವೃತ್ತ ನೌಕಸೇನಾ ಕಮಾಂಡರ್ ವಸಂತ ರಾವ್ ಭಾರತೀಯ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯಕ್ರಮಗಳು ಶಿಶು ಮಂದಿರ ಮೂಲಕ ನಡೆಯಲಿ ಎಂಬುದಾಗಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಕೆ ನಾರಾಯಣ ನಾಯಕ್ ವಿದ್ಯಾರ್ಥಿಗಳು ದೇವರಿಗೆ ಸಮಾನ ಅವರಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಿದರೆ ಸಮಾಜ ಒಳ್ಳೆಯದಾಗುತ್ತದೆ ಎಂದರು.

ಸಜೀಪ ಮಾಗಣೆ ತಂತ್ರಿಎಂ ಸುಬ್ರಹ್ಮಣ್ಯ ಭಟ್ ಮಾತನಾಡಿ ಶಿಶುಮಂದಿರದ ಮೂಲಕ ಮಕ್ಕಳಿಗೆ ಒಳ್ಳೆಯ ಶಿಸ್ತು ಸಂಸ್ಕಾರ ಜೀವನ ಮೌಲ್ಯಗಳು ಸಿಗುತ್ತವೆ ಎಂದರು . ಜಯ ಶಂಕರ ಬಾಸ್ರಿ ತಾಯ, ಸುಬ್ರಾಯ ಕಾರಂತ, ವಿಜಯ ರೈ. ಸೋಮನಾಥ ಕಂದೂರು, ಸುರೇಶ್ ಬಂಗೇರ.ಜಗದೀಶ ಐತಾಳ, ಪ್ರದೀಪ್ ಶೆಟ್ಟಿಬಿಜಂದಾರ್ ,ವಿಜಯಲಕ್ಷ್ಮಿ ಮೈಯ್ಯ. ರತ್ನವತಿ, ರಕ್ಷಿತಾ ಮಾತಾಜಿ ಸುಜಾತ ಮಾತಾಜಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here