ವರದಿ ರಾಯಿ ರಾಜ ಕುಮಾರ
ಸರಕಾರಿ ಪ್ರೌಢಶಾಲೆ ಅಳಿಯೂರು ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಕಿನ ಚದುರುವಿಕೆ ರಾಮನ್ ಪರಿಣಾಮದ ಕುರಿತು ನೋಬೆಲ್ ಪ್ರಶಸ್ತಿಯನ್ನು ಪಡೆದ ಈ ದಿನವನ್ನು ರಾಮನ್ ರ ಭಾವಚಿತ್ರವನ್ನು ರಂಗೋಲಿಯಲ್ಲಿ ಅನಾವರಣ ಗೊಳಿಸಿ LED ಬಲ್ಬ್ ಬೆಳಗುವುದರ ಮೂಲಕ ಚಾಲನೆಯನ್ನು ನೀಡಲಾಯಿತು, ಅಲ್ಲದೆ ಗಣಿತ ಶಿಕ್ಷಕಿ ವಿದ್ಯಾ ಸಂದೀಪ್ ನಾಯಕ ಮತ್ತು ಆನಿ ಡಿಂಪಲ್ ಕ್ಯಾಸ್ತಲಿನೋ ಇವರು ಗಣಿತ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದರು ಎಂಟನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಗಣಿತದ ಮಾದರಿ ಚಿನ್ಹೆ ಇತ್ಯಾದಿ ಗಣಿತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕಲಾತ್ಮಕವಾಗಿ ಸೃಜನಶೀಲರಾಗಿ ಬಿಡಿಸಿದ ರಂಗೋಲಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದುವು. ವಿಜ್ಞಾನ ಮಾದರಿ ತಯಾರಿಕೆ, ಚಾರ್ಟ್ ತಯಾರಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಸಮೀಪದ ಪ್ರಾಥಮಿಕ ಶಾಲೆ ಅಳಿಯೂರು ಮತ್ತು ಬೋರುಗುಡ್ಡೆಯಿಂದ 5,6,7ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಆಗಮಿಸಿ ಗಣಿತ ರಂಗೋಲಿ, ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರಕಲಾ ಶಿಕ್ಷಕಿ ರಂಜನಾ ಕುಮಾರಿಯವರು ರಚಿಸಿದ ಕ್ರಿಯಾತ್ಮಕ ರಂಗೋಲಿ ಸಿ ವಿ ರಾಮನ್ ಭಾವಚಿತ್ರ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದು ವಿಶೇಷವಾಗಿತ್ತು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವೀಂದ್ರ ರವರು LED ಬಲ್ಬ್ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಶಿಕ್ಷಕರಾದ ಪದ್ಮಿನಿ ‘ರಾಮನ್ ಪರಿಣಾಮ’ದ ಬಗ್ಗೆ ತಿಳಿಸಿದರು, ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿಜ್ಞಾನ ದಿನದ ಪ್ರಮಾಣವಚನವನ್ನು ವಿಜ್ಞಾನ ಶಿಕ್ಷಕಿ ಮಂಜುಳಾ ಬೋಧಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು.
.

