ಗಾಯತ್ರಿ ಸಚ್ಚಿದಾನಂದ ಉಡಪರ ಸ್ಮರಣಾರ್ಥ ಉಚಿತ ಕಥಾ ಸ್ಪರ್ಧೆಗೆ ಆಹ್ವಾನ

0
9

ದಾವಣಗೆರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಕಿನ್ನಿಗೋಳಿಯ ಅನಂತ ಪ್ರಕಾಶನದ ಆಶ್ರಯದಲ್ಲಿ ಗಾಯತ್ರಿ ಸಚ್ಚಿದಾನಂದ ಉಡಪರ ಸ್ಮರಣಾರ್ಥ ರಾಜ್ಯ ಮಟ್ಟದ ಉಚಿತ ಕಥಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅನಂತ ಪ್ರಕಾಶನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಕಥಾ ಸ್ಪರ್ಧೆಯಲ್ಲಿ ಭಾಗವಹಿಸುವವರ ವಿಷಯ ಆಯ್ಕೆ ಅವರದ್ದು. ಪ್ರಥಮ ಬಹುಮಾನ ರೂಪಾಯಿ 7500.00 ಮತ್ತು ಅನಂತ ಪ್ರಕಾಶನದ 2500 ರೂ. ಬೆಲೆಯ ಪುಸ್ತಕಗಳು, ದ್ವಿತೀಯ ಬಹುಮಾನ ರೂಪಾಯಿ 5000.00 ಮತ್ತು ಅನಂತ ಪ್ರಕಾಶನದ 1500 ರೂ. ಬೆಲೆಯ ಪುಸ್ತಕಗಳು, ತೃತೀಯ ಬಹುಮಾನ ರೂಪಾಯಿ 3000.00 ಮತ್ತು ಅನಂತ ಪ್ರಕಾಶನದ 1500 ರೂ. ಬೆಲೆಯ ಪುಸ್ತಕಗಳು. ಸಮಾಧಾನಕರ ಬಹುಮಾನ ರೂಪಾಯಿ 1000.00 ಮತ್ತು ಅನಂತ ಪ್ರಕಾಶನದ 1000 ರೂ.ಬೆಲೆಯ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಅನಂತ ಪ್ರಕಾಶನ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೊಡುತ್ತೂರು ಸಚ್ಚಿದಾನಂದ ಉಡಪರು ಪ್ರಕಟಿಸಿದ್ದಾರೆ.

ಸ್ವಂತ ರಚನೆಯ ಕಥೆ 4,000 ಪದಗಳು 4-5 ಪುಟಗಳಲ್ಲಿ ಬರೆದು ಆಗಸ್ಟ್ 31 ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬೇಕಾಗಿ ಅನಂತ ಪ್ರಕಾಶನದ ಸಹ ಸಂಪಾದಕರಾದ ಮಿಥುನ ಕೊಡೆತ್ತೂರ ವಿನಂತಿಸಿದ್ದಾರೆ. ಕಥೆ ಬರೆದು ಕಳಿಸುವ ವಿಳಾಸ ಅನಂತ ಪ್ರಕಾಶ ಗಾಯತ್ರಿ ಪ್ರಕಾಶನ ಪಿ.ಬಿ. ಸಂಖ್ಯೆ 15, ಕಿನ್ನಿಗೋಳಿ-574150 ಮೂಲ್ಕಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ 9481141795 ಈ ಸನೀಹವಾಣಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here