ಮಂಗಳೂರು ಫೆ 28: ಮಿಲಾಗ್ರಿಸ್ ಕಾಲೇಜಿನ ಭಾಷಾ ಸಂಘ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಹಯೋಗದೊಂದಿಗೆ “ಕಂಟೆಂಟ್ ರೈಟಿಂಗ್: ಸ್ಕ್ರಿಪ್ಟ್‌ನಿಂದ ಸ್ಕ್ರೀನ್‌ವರೆಗೆ” (Content Writing as a Profession: From Script to Screen) ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಫಾದರ್ ಬೋನವೆಂಚರ್ ನಜರೆತ್ ಮಾತನಾಡಿ, ಇಂದಿನ ವಿದ್ಯುನ್ಮಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಇಂತಹ ಸೃಜನಾತ್ಮಕ ಕಾರ್ಯಗಾರಗಳು ಅಂತ್ಯಂತ ಸಹಕಾರಿ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆಲ್ಟರ್ ಮಾರ್ಕೆಟಿಂಗ್ ಸಲ್ಯೂಷನ್ಸ್ ಸಂಸ್ಥೆಯ ಸಹ-ಸಂಸ್ಥಾಪಕಿ ದಿಶಾ ಪ್ರಭು ಅವರು ಡಿಜಿಟಲ್ ಮಾಧ್ಯಮದಲ್ಲಿ ವಿಷಯ ರಚನೆಯ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಸೆಂಟ್ ಮಹಿಳಾ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಡಾ. ಗೌತಮ್ ಜ್ಯೋತ್ಸ್ನಾ ಅವರು ಚಿತ್ರಕಥೆ ಮತ್ತು ಬರವಣಿಗೆಯ ಸೃಜನಶೀಲ ಆಯಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಾಗಾರದ ನಿರ್ದೇಶಕರಾಗಿ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆಲ್ವಿನ್ ಸೆರಾವೊ ಸ್ವಾಗತಿಸಿ, ಕೃತಕಬುದ್ಧಿಮತ್ತೆಯಬಳಕೆಯಯುಗದಲ್ಲಿನಾವಿದ್ದೇವೆ. ವಿದ್ಯಾರ್ಥಿಗಳಲ್ಲಿಸೃಜನಾತ್ಮಕಮೌಲ್ಯಗಳನ್ನುಬೆಳೆಸುವುದಕ್ಕೆ ಇದು ಸಹಕಾರಿಎಂದರು.

ವಿವಿಧ ಕಾಲೇಜುಗಳ ಸುಮಾರು 150 ವಿದ್ಯಾರ್ಥಿಗಳು ಮತ್ತು ವಿವಿಧ ಕಾಲೇಜಿನ ಉಪನ್ಯಾಸಕರು ಈ ಸಂವಾದಾತ್ಮಕ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬರವಣಿಗೆಯ ವೃತ್ತಿಪರ ಸಾಧ್ಯತೆಗಳ ಬಗ್ಗೆ ಮಾಹಿತಿ ಪಡೆದರು.ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿಭಾಗವಹಿಸಿದವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಹ ಸಂಯೋಜಕಿ ಪ್ರೊ. ಸೌಮ್ಯ ಕೋಟ್ಯಾನ್, ಮಮತಾಶೆಟ್ಟಿ, ಪ್ರಿಯಾ ಭಟ್, ನೌಶಿನ್ ಬಾನು, ಪ್ರಮೀಳಾಮಸ್ಕರೇನಸ್ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಮಂಜುಷಾ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರಾವ್ಯ ಎನ್ ಕಾರ್ಯಕ್ರಮ ನಿರೂಪಿಸಿದರು.

