ಉಜಿರೆ: ಆಟಿ ತಿಂಗಳ ತಿನಿಸುಗಳೊಂದಿಗೆ “ಆಟಿದ ಕೂಟ” ನಾಟಿ ವೈದ್ಯರಿಗೆ ಸನ್ಮಾನ

0
1

ಉಜಿರೆ: ಆಸರೆ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘ ಉಜಿರೆ ಇವರ ವತಿಯಿಂದ ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ ನಡೆದ “ಆಟಿಕೂಟ” ಕಾರ್ಯಕ್ರಮವು ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳು ಹಾಗೂ ಸಂಘದ ವತಿಯಿಂದ ನಾಟಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಹಿರಿಯ ನಾಟಿ ವೈದ್ಯ ರಾದ ಶ್ರೀನಿವಾಸ ಪೂಜಾರಿ ಪೆರ್ಮುದೆ, ಕೊಯೂರು ಭಾಗವಹಿಸಿ, ಆಟಿ ತಿಂಗಳ ತಿನಿಸುಗಳು ಮತ್ತು ನಾಟಿ ಜೀವನದ ಮಹತ್ವದ ಕುರಿತು ಮಾತನಾಡಿದರು. ಆಟಿ ತಿಂಗಳಲ್ಲಿ ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ವಿವರಿಸಿದ ಅವರು, ಪೌಷ್ಟಿಕಾಂಶಯುಕ್ತ ಸಾಂಪ್ರದಾಯಿಕ ಆಹಾರಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಅದ್ಯಕ್ಷ ಪ್ರಶಾಂತ್ ಕುದ್ಯಾಡಿ ಸ್ವಾಗತಿಸಿ, ಗೌತಮ್ ಕುಕ್ಯಾನ್ ನಿರೂಪಿಸಿದರು.

LEAVE A REPLY

Please enter your comment!
Please enter your name here