ಇವರು ಸುಳ್ಯ ತಾಲೂಕಿನ ನೀರ್ಕಜೆ ಪೆರುವಾಜೆ ಗ್ರಾಮದ ಶಂಭು ಭಟ್ ಮತ್ತು ಲಕ್ಷ್ಮೀ ಅಮ್ಮ ದಂಪತಿಯ 7ಜನ ಮಕ್ಕಳಲ್ಲಿ ಮೂರನೆಯಯವರು. ಕಾಲೇಜು ವ್ಯಾಸಂಗ ಮಾಡುತ್ತಿರುವಾಗಲೇ ತಂದೆಯವರ ಅನಾರೋಗ್ಯ ನಿಮಿತ್ತ ಕಾಲೇಜು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಹಾಗಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಹೊರಬೇಕಾಯಿತು.. ಬಂಧು ಬಾಂಧವರ, ಹಿರಿಯರ, ಪ್ರೀತಿ ,ಆಧಾರಕ್ಕೆ ಪಾತ್ರ.. ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಸಂಧರ್ಭದಲ್ಲಿ ಪೆರುವಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ.

ಹಾಗೆಯೇ ಶ್ರೀ ಪೆರುಮಾಳ್ ಶ್ರೀ ಜಲದುರ್ಗಾ ದೇವರ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶದ ಸಮಯದಲ್ಲಿ ತನು ಮನ ಧನ ಸಹಕಾರವನ್ನು ನೀಡುತ್ತಾ, ಪದಾಧಿಕಾರಿಯಾಗಿಯೂ ಕೆಲಸ ಮಾಡಿರುತ್ತಾರೆ. ಪೆರುವೋಡಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶದ ಸಮಯದಲ್ಲಿ ತನು ಮನ ಧನ ಸಹಾಯ ಮಾಡುತ್ತಾ, ಬಂದಿರುತ್ತಾರೆ. ಸಮಿತಿಯಲ್ಲಿ ಉಪಾಧ್ಯಕ್ಷರಾಗಿ, ಪ್ರಸ್ತುತ ಮುಕ್ನೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ.
ಇವರ ಕೃಷಿಯ ವಿಷಯ ಹೇಳುವುದಾದರೆ, ಮೂರು ನಾಲ್ಕು ಎಕರೆಯಷ್ಟಿದ್ದ ಕೃಷಿ ಹಿಡುವಳಿಯ ಜಾಗವನ್ನು ಇಂದು 20 ರಿಂದ 25 ಎಕರೆಯಷ್ಟು ಮಾಡಿಸಿ, ಬೆಳ್ಳಾರೆ ಸಮೀಪ ಜಾಗ ಖರೀದಿಸಿ ಅಲ್ಲಿಯೂ ಕೃಷಿ ಕಾರ್ಯಗಳನ್ನು ಸುಮಾರು ವರುಷಗಳಿಂದ ಮಾಡಿಸಿಕೊಂಡು ಬರುತ್ತಿದ್ದಾರೆ . ಭಂದು, ಭಾಂದವರ, ಹಿರಿಯರ ಪ್ರೀತಿ, ಆದರಕ್ಕೆ ಪಾತ್ರ..
ಪತ್ನಿ-ವೀಣಾ ಸರಸ್ವತಿ ಗೃಹಿಣಿಯಾಗಿದ್ದು, ಮಗ-ಶ್ಯಾಮ್ ಕಿಶೋರ್ ಬೆಂಗಳೂರಿನ MNC ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಮಗಳು – ಸಿಂಧೂ ಇಂಜಿನಿಯರಿಂಗ್ ಪದವಿ ಬೆಂಗಳೂರಿನಲ್ಲಿ ಕಲಿಯುತ್ತಿದ್ದಾರೆ.

